ರಾಹುಲ್ ಗಾಂಧಿ ದ್ವಿಪೌರತ್ವ ವಿಚಾರದ ಕುರಿತು ವಿಚಾರಣೆ ನಡೆಸಿದ ಕೋರ್ಟ್, ನಿರ್ಧಾರವನ್ನು ಕೇಂದ್ರಕ್ಕೆ ಬಿಟ್ಟಿದೆ.
ಪೌರತ್ವ ಸಂಬಂಧಿತ ವಿಷಯಗಳ ಬಗ್ಗೆ ನಿರ್ಧರಿಸಲು ಕೇಂದ್ರ ಸರ್ಕಾರ ಸಮರ್ಥವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಲೋಕಸಭಾ ವಿಪಕ್ಷ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ದ್ವಿಪೌರತ್ವಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಈ ವಿಚಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಮತ್ತು ನ್ಯಾಯಮೂರ್ತಿ ಜಸ್‌ಪ್ರೀತ್ ಸಿಂಗ್ ಅವರ ಪೀಠದ ವಿಚಾರಣೆ ನಡೆಸುತ್ತಿರುವ ಎಸ್. ವಿಘ್ನೇಶ್ ಶಿಶಿರ್ ಅವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ಚುನಾವಣಾ ಆಯುಕ್ತರು, ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮತ್ತು ರಾಯ್ ಬರೇಲಿಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಯಿತು.
ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ಪೌರತ್ವ ಆರೋಪದಡಿ ಸಲ್ಲಿಸಿರುವ ಅರ್ಜಿಯ ಕುರಿತು ನಿರ್ಧಾರವನ್ನು ತಿಳಿಸಲು ಅಲಹಾಬಾದ್ ಹೈಕೋರ್ಟ್ ಮುಂದಿನ ವರ್ಷ ಮಾರ್ಚ್ 24 ರವರೆಗೆ ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ ನೀಡಿದೆ.
ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಸ್ ವಿಘ್ನೇಶ್ ಶಿಶಿರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಮತ್ತು ನ್ಯಾಯಮೂರ್ತಿ ಜಸ್ ಪ್ರೀತ್ ಸಿಂಗ್ ಅವರ ವಿಘ್ನೇಶ್‌ಗೂ ಮುನ್ನವೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ರಾಹುಲ್ ಪೌರತ್ವಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ತಮ್ಮ ವರದಿಯನ್ನು ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನ್ಯಾಯಾಲಯದಿಂದ ನಿರ್ದೇಶನ ಕೋರಿದ್ದರು.
ವಿಘ್ನೇಶ್ ಶಿಶಿರ್ ಅವರು ತಮ್ಮ ಅರ್ಜಿಯಲ್ಲಿ ರಾಹುಲ್ ಗಾಂಧಿಗೆ ದ್ವಿಪೌರತ್ವವಿದೆ. ಅದು ಸಾಬೀತಾದರೆ ಭಾರತೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿದ್ದಾರೆ.
ದ್ವಿಪೌರತ್ವವೆಂದರೆ ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ದೇಶಗಳ ಪೌರತ್ವ ಹೊಂದಿರುವುದು ಎಂದರ್ಥ. ಯುನೈಟೆಡ್ ಸ್ಟೇಟ್ಸ್, ಫಿನ್ಲ್ಯಾಂಡ್, ಅಲ್ಬೇನಿಯಾ, ಇಸ್ರೇಲ್ ಮತ್ತು ಪಾಕಿಸ್ತಾನದಂತಹ ಅನೇಕ ದೇಶಗಳು ದ್ವಿಪೌರತ್ವವನ್ನು ಅನುಮತಿಸುತ್ತವೆ. ಭಾರತವು ತನ್ನ ಸಂವಿಧಾನದ ಅಡಿಯಲ್ಲಿ ದ್ವಿಪೌರತ್ವವನ್ನು ಅನುಮತಿಸುವುದಿಲ್ಲ. ಹೀಗಾಗಿ ಈಗ ರಾಹುಲ್ ವಿರುದ್ಧ ಈ ಆರೋಪ ಕೇಳಿ ಬಂದಿದೆ.