ಮಹಿಳೆಯ ವಿರುದ್ಧ ಸಿ.ಟಿ. ರವಿ ಬಳಿಸಿರುವ ಪದ ಬಳಕೆ ತಪ್ಪು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿ.ಟಿ. ರವಿ ಹೇಳಿದ್ದಾರೆ. ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ಷೇಪ ವ್ಯಕ್ತಪಡಿಸಿ, ಕೊಲೆಗಡುಕ ಅಂದಿದ್ದಾರೆ. ಆಗ ಸಿ.ಟಿ. ರವಿ, ನೀನು ಪ್ರಾಸ್ಟಿಟ್ಯೂಟ್ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾತನಾಡಿದ್ದಾರೆ.
12 ಬಾರಿ ಈ ಪದ ಬಳಕೆ ಮಾಡಿದ್ದಾರೆ. ಇದಕ್ಕೆ ಪೂರಕ ದಾಖಲೆಗಳು ನಮ್ಮ ಬಳಿ ಇವೆ. ಇದು ಚಿಕ್ಕಮಗಳೂರು ಸಂಸ್ಕೃತಿನಾ? ಭಾರತದ ಸಂಸ್ಕೃತಿನಾ? ಅಥವಾ ಬಿಜೆಪಿ ಸಂಸ್ಕೃತಿನಾ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭಾಪತಿಗಳು ಚರ್ಚೆಗೆ ಅವಕಾಶ ಕೊಡಬೇಕಿತ್ತು. ಅವರ ಬಳಿ ಹೇಳಿಕೆ ತಗೊಂಡಿದಾರೆ. ಸಭಾಪತಿಗಳು ಯಾವುದೇ ಪಕ್ಷದವರಲ್ಲ. ಸಭಾಪತಿ ಅಂದ್ರೆ, ನಾನ್ ಪೊಲಿಟಿಕಲ್ ಮೆಂಬರ್. ಪೊಲೀಸರು ಏನು ಮಾಡಿದಾರೋ ಗೊತ್ತಿಲ್ಲ. ಖಾನಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮೀಟಿಂಗ್ ಮಾಡಿದೆ. ಪೊಲೀಸರ ವರ್ತನೆ ಕೂಡ ಸರಿಯಿಲ್ಲ. ನಾನು ಯಾವುದರಲ್ಲೂ ಇಂಟರ್ ಫಿಯರ್ ಆಗಿಲ್ಲ. ಇದು ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿರುವುದರಿಂದ ಇಡೀ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿಗೆ ಬಂದಿದ್ದಾರೆ. ಈ ಕೊಳಕಬಾಯಿ ಹೊಸದಲ್ಲ. ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲ ಖಾನ್ ಅಂತ ಕರೆದಿದ್ದರು. ಇವರದ್ದು ಹರಕಲು ಬಾಯಿ. ಯಾರಿಗೂ