ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಟೋ ಬಾಡಿಗೆ ದರ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಪ್ರತಿ ಕಿ.ಮೀಟರ್ ಗೆ 5 ರೂ. ಏರಿಕೆಯಾಗುವ ಸಾಧ್ಯತೆ ಇದೆ.
ಒಂದು ವೇಳೆ ದರ ಏರಿಕೆಯಾದರೆ ಹೊಸ ವರ್ಷಕ್ಕೆ ಆಟೋ ದರ ಏರಿಕೆಯ ಶಾಕ್ ಕೂಡ ಬೆಂಗಳೂರಿಗರಿಗೆ ತಟ್ಟಲಿದೆ. ಆಟೋ ದರ ಏರಿಕೆ ಮಾಡಬೇಕೆಂದು ಈಗಾಗಲೇ ಆಟೋ ಚಾಲಕರು ಹಾಗೂ ಸಂಘಟನೆಗಳು ಮನವಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಡಿ. 23ರಂದು ಆಟೋ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನು ನಗರದಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಕರೆಯಲಾಗಿದೆ.
ದರ ಏರಿಕೆಯ ಕುರಿತು ಸಾರಿಗೆ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈಗ ಪ್ರತಿ ಒಂದು ಕಿ.ಮೀಗೆ 15 ರೂ, 2 ಕಿ.ಮೀ 30 ರೂ ದರ ಇದೆ. ಸಭೆಯಲ್ಲಿ ಬೆಂ. ನಗರ ಜಿಲ್ಲಾಧಿಕಾರಿ, ಜಯನಗರ ಆರ್ ಟಿಓ ಅಧಿಕಾರಿ, ಟ್ರಾಫಿಕ್ ಡಿಸಿಪಿ, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿ, ಗ್ರಾಹಕರ ವೇದಿಕೆಯ ಓರ್ವ ಅಧಿಕಾರಿ ಇರಲಿದ್ದಾರೆ. ಚರ್ಚೆಯ ನಂತರ ದರ ಏರಿಕೆಯ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.
ಮತ್ತೆ ಏರಿಕೆಯಾಗುತ್ತಾ ಆಟೋ ದರ?