ಬೆಂಗಳೂರು: 9 ತಿಂಗಳಿಂದ ಹೈನುಗಾರಿಕೆಗೆ ಪ್ರೋತ್ಸಾಹಧನ ಸಿಕ್ಕಿಲ್ಲ. ರೈತರಿಗೆ ಹಣ ಇಲ್ಲದ ಕಾರಣ ನೀಡಿಲ್ಲ ಎಂಬ ಉತ್ತರ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಕ್ಷೀರಧಾರೆ ಯೋಜನೆಯಡಿ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ ಸರ್ಕಾರ 5 ರೂ. ಪ್ರೋತ್ಸಾಹಧನ ನೀಡಬೇಕಿದೆ. ರಾಜ್ಯದಲ್ಲಿ 16 ಹಾಲು ಒಕ್ಕೂಟಗಳಿವೆ. ಇವುಗಳಿಗೆ ಸರಾಸರಿ ಪ್ರತಿ ದಿನ ಒಂದು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರತಿ ಲೀಟರ್ ಗೆ 2 ರೂ.ನಂತೆ ಹೈನುಗಾರರಿಗೆ ಪ್ರೋತ್ಸಾಹಧನ ನೀಡುವ ಯೋಜನೆ 2008ರಲ್ಲಿ ಆರಂಭಿಸಲಾಗಿತ್ತು. 2013ರಲ್ಲಿ ಲೀಟರ್‌ಗೆ 4 ರೂ.ಗೆ ಏರಿಕೆಯಾಗಿದ್ದು, 2016ರಲ್ಲಿ 5 ರೂ.ಗೆ ಹೆಚ್ಚಳ ಮಾಡಲಾಗಿತ್ತು.
ಪ್ರೋತ್ಸಾಹಧನವನ್ನು 7 ರೂ.ಗೆ ಹೆಚ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದುರ. ಆದರೆ, ಇದು ಇದುವರೆಗೂ ಜಾರಿಯಾಗಿಲ್ಲ. 2023ರ ವಿಧಾನಸಭೆ ಚುನಾವಣೆಗೂ ಮುನ್ನ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. 2024ರ ಜೂನ್‌ನಿಂದ 2024ರ ಅಕ್ಟೋಬರ್‌ವರೆಗೆ ಪ್ರೋತ್ಸಾಹ ಧನ ಪಾವತಿ ಮಾಡಿಲ್ಲ. ರೈತರಿಗೆ ಪಾವತಿಸಬೇಕಾದ ಮೊತ್ತ 606.69 ಕೋಟಿ ರೂ. ಬಾಕಿ ಇದೆ ಎಂದು ವೆಂಕಟೇಶ್ ವಿಧಾನಸಭೆಗೆ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯದ ಹೈನುಗಾರರಿಗೆ ಅಕ್ಟೋಬರ್ ತಿಂಗಳಿಗೆ 6.85 ಕೋಟಿ ರೂ. ಪಾವತಿಸಬೇಕಿದ್ದರೆ, ಎಸ್‌ಟಿ ರೈತರಿಗೆ 2024ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಇನ್ನೂ 9 ಕೋಟಿ ರೂ. ಪಾವತಿಯಾಗಬೇಕಿದೆ. ಹೀಗಾಗಿ ರೈತರು ಗೌರವ ಧನ ಪಾವತಿಸುವಂತೆ ಮನವಿ ಮಾಡುತ್ತಿದ್ದಾರೆ.