ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಗೆ ಜಾಮೀನು ಸಿಕ್ಕಿದೆ. ಈ ಮಧ್ಯೆ ಅವರಿಗೆ ಆತಂಕವೂ ಎದುರಾಗುತ್ತಿದೆ.
ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಸರ್ಜರಿ ಪಡೆಯುವುದಕ್ಕಾಗಿ ಮಧ್ಯಂತರ ಜಾಮೀನು ಪಡೆದಿದ್ದರು. ಈ ಮಧ್ಯೆ ಅವರಿಗೆ ರೆಗ್ಯುಲರ್ ಜಾಮೀನು ಕೂಡ ಸಿಕ್ಕಿದೆ. ರೆಗ್ಯುಲರ್ ಬೇಲ್ ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್ ದರ್ಶನ್‌ಗೆ ಕೆಲವು ಎಚ್ಚರಿಕೆ ನೀಡಿದೆ. ಜಾಮೀನು ಆದೇಶದಲ್ಲಿ ಸರ್ಜರಿ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ಕುರಿತು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.
ದರ್ಶನ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆಂದು ವೈದ್ಯರ ವರದಿ ಇದೆ. ಸರ್ಜರಿ ಅಗತ್ಯವೆಂಬ ಬಳ್ಳಾರಿ ವೈದ್ಯರ ವರದಿಯನ್ನ ಬಿಜಿಎಸ್ ವೈದ್ಯರು ದೃಢಪಡಿಸಿದ್ದಾರೆ. ಸರ್ಜರಿಗಾಗಿ ದರ್ಶನ್‌ರನ್ನ ಸಿದ್ಧಪಡಿಸಲಾಗುತ್ತಿದೆ ಎಂದು ವರದಿ ನೀಡಿದ್ದಾರೆ. ದರ್ಶನ್ ವೈದ್ಯಕೀಯ ಪರಿಸ್ಥಿತಿಯನ್ನ ಈ ಹಂತದಲ್ಲಿ ಸಂದೇಹಿಸಲು ಕಾರಣಗಳಿಲ್ಲ. ರೆಗ್ಯುಲರ್ ಜಾಮೀನಿಗೂ, ವೈದ್ಯಕೀಯ ಕಾರಣದ ಜಾಮೀನಿಗೂ ವ್ಯತ್ಯಾಸವಿದೆ. ಹೀಗಾಗಿ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಕಾನೂನಿನಲ್ಲಿ ಇದಕ್ಕೆ ಹಾದಿಗಳಿವೆ ಎಂದು ನ್ಯಾಯಮೂರ್ತಿ ಉಲ್ಲೇಖಿಸಿದ್ದಾರೆ. ಹೀಗಾಗಿ ದರ್ಶನ್ ಗೆ ಆತಂಕ ಶುರುವಾಗಿದೆ.
ಒಂದು ವೇಳೆ ದರ್ಶನ್ ಚಿಕಿತ್ಸೆಯ ವೇಳೆ ಸುಳ್ಳು ಹೇಳಿದ್ದು, ನಿಜವಾದರೆ, ಪರಿಣಾಮ ಕೂಡ ಎದುರಿಸಬಹುದು. ಇನ್ನೊಂದೆಡೆ ದರ್ಶನ್ ಸೇರಿದಂತೆ 7 ಜನ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಸಿಕ್ಕಿರುವುದನ್ನು ಪ್ರಶ್ನಿಸಿ ತನಿಖಾಧಿಕಾರಿಗಳು ಕೂಡ ಮುಂದಾಗಿದ್ದಾರೆ. ಸಹಜವಾಗಿ ದರ್ಶನ್ ಗೆ ಆತಂಕ ಶುರುವಾಗಿದೆ.