ಬೆಂಗಳೂರು: ಇತ್ತೀಚೆಗೆ ಚಿಕ್ಕ ಚಿಕ್ಕ ಕಾರಣಗಳಿಗೂ ಡಿವೋರ್ಸ್ ಗೆ ಅರ್ಜಿ ಹಾಕುವುದು ಆತ್ಮಹತ್ಯೆ ಮಾಡಿಕೊಳ್ಳುವುದು ಸಮಾನ್ಯವಾಗಿ ಬಿಟ್ಟಿದೆ.
ಈಗ ಮಹಿಳೆಯೋರ್ವರು ತಮ್ಮ ಗಂಡ ಬೆಕ್ಕನ್ನು ಹೆಚ್ಚಾಗಿ ಇಷ್ಟ ಪಡುತ್ತಾನೆಂದು ಡಿವೋರ್ಸ್ ಗೆ ಅರ್ಜಿ ಹಾಕಿದ್ದಾರೆ.
ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಮುದ್ದಿನ ಬೆಕ್ಕನ್ನು ತನ್ನ ಗಂಡ ಜಾಸ್ತಿ ಇಷ್ಟಪಡುತ್ತಾನೆ ಎಂದು ದೂರಿದ್ದಾರೆ. ಬೆಕ್ಕಿನಿಂದಾಗಿ ತನ್ನನ್ನು ನಿರ್ಲಕ್ಷ್ಯ ಮಾಡಿದ್ದಾನೆ ಅಂತಲೂ ಆರೋಪಿಸಿದ್ದಾಳೆ. ಇದೇ ಕಾರಣಕ್ಕೆ ತನ್ನ ಗಂಡನಿಂದ ತನಗೆ ಡಿವೋರ್ಸ್ ಬೇಕು ಎಂದು ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ ಎಂದು ವರದಿಯಾಗಿದೆ.
ಮಹಿಳೆ ಮಾಡಿರುವ ಆರೋಪ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಆರೋಪಕ್ಕೆ ಅಗತ್ಯವಾದ ಕಾನೂನು ಮಾನದಂಡಗಳನ್ನು ಪೂರೈಸಿಲ್ಲ. ಹೀಗಾಗಿ ಹೀಗಾಗಿ ಕ್ರಿಮಿನಲ್ ಅಪರಾಧವಾಗದ ಸಣ್ಣ ಸಣ್ಣ ದೇಶೀಯ ಘರ್ಷಣೆಗಳಿಂದ ನ್ಯಾಯಾಂಗವು ಹೊರೆಯಾಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಪ್ರಕರಣವನ್ನು ಕೌನ್ಸೆಲಿಂಗ್ ಮೂಲಕ ಪರಿಹರಿಸಬಹುದು. ಕೌಟುಂಬಿಕ ಕ್ರೌರ್ಯದ ನಿಜವಾದ ಪ್ರಕರಣಗಳು ಮತ್ತು ಕ್ಷುಲ್ಲಕವೆಂದು ಪರಿಗಣಿಸಬಹುದಾದ ಪ್ರಕರಣಗಳ ನಡುವಿನ ವಿವೇಚನೆಯ ಪ್ರಾಮುಖ್ಯತೆಯನ್ನು ನ್ಯಾಯಾಧೀಶರು ತಿಳಿಸಿದ್ದಾರೆ.
ಹೀಗಾಗಿ ಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಹೆಂಡತಿ ಮತ್ತು ಗಂಡನಿಗೆ ನೋಟಿಸ್ ಜಾರಿ ಮಾಡಲು ಆದೇಶ ನೀಡಲಾಗಿದೆ.