ಬೆಂಗಳೂರು: ಪತಿಯಿಂದ ದೂರ ನೆಲೆಸಿ ವೈವಾಹಿಕ ಸುಖ- ಭೋಗಗಳಿಂದ ವಂಚಿಸುವುದು ಕ್ರೌರ್ಯಕ್ಕೆ ಸಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಈ ವೇಳೆ ಪತಿಯಿಂದ ದೂರವಿದ್ದ ಪತ್ನಿಗೆ ವಿಚ್ಛೇದನವನ್ನು ಕೂಡ ನ್ಯಾಯಾಲಯ ನೀಡಿದೆ. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ಈ ರೀತಿ ಅಭಿಪ್ರಾಯ ಪಟ್ಟಿದೆ.
ಅಲ್ಲದೇ, ಕೋರ್ಟ್ ತನ್ನ ಆದೇಶದಲ್ಲಿ ಪತಿಯನ್ನು ತೊರೆದು ಕ್ರೌರ್ಯಕ್ಕೆ ದೂಡಿರುವುದು ಮನೆ ತೊರೆದಿರುವ ಆಧಾರದಲ್ಲಿ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ ಎಂದು ಹೇಳಇದೆ.
ಅರ್ಜಿದಾರರ ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಂತ ದುಡಿಮೆಯಿದೆ. ಅವರು ತಮ್ಮ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯದ ಎದುರು ಕೂಡ ಬಂದಿಲ್ಲ. ಹೀಗಾಗಿ ಶಾಶ್ವತವಾದ ಜೀವನಾಂಶ ನೀಡಬೇಕಾದ ಅನಿವಾರ್ಯತೆ ಎದುರುಗಾವುದಿಲ್ಲ ಎಂದು ಕೂಡ ನ್ಯಾಯಾಲಯ ಆದೇಶ ನೀಡಿದೆ. ದಂಪತಿ ವಿವಾಹವಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇಬ್ಬರು ಮಕ್ಕಳಿದ್ದರು. ಆದರೆ, ಪತ್ನಿ ಫೋನ್ ನಲ್ಲಿ ಯಾವಾಗಲೂ ಬ್ಯೂಸಿ ಇರುತ್ತಿದ್ದರು. ಈ ಕುರಿತು ಪತಿ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಪತಿ ಬುದ್ಧಿ ಹೇಳಿದ್ದಕ್ಕೆ ಬೇಸತ್ತು ಮನೆ ಬಿಟ್ಟು ಕೂಡ ಹೋಗಿದ್ದರು. ಹೀಗಾಗಿ ಪತಿ ವಿಚ್ಛೇದನ ಕೋರಿದ್ದರು. ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಆದರೆ, ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.