ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂರಿಗೆ ಮುತ್ತು ಕೊಡುತ್ತಾರೆ. ನಮಗೆ ಲಾಠಿ ಏಟು ಕೊಡುತ್ತಾರೆ ಎಂದು ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಪೊಲೀಸ್ ಠಾಣೆಗೆ, ಡಿಜೆ, ಕೆಜೆ ಹಳ್ಳಿಯ ಗಲಾಟೆ, ಗಲಭೆ ಮಾಡುವ ಮುಸ್ಲಿಂರಿಗೆ ಇವರು ಮುತ್ತು ನೀಡಿ ಪ್ರೀತಿಸುತ್ತಾರೆ. ಬಾಂಬ್ ಇಟ್ಟವರನ್ನೂ ಪ್ರೀತಿಸುತ್ತಾರೆ. ಆದರೆ, ಶಾಂತಿಯಿಂದ ಹೋರಾಟ ಮಾಡಿದ ನಮ್ಮ ಮೇಲೆ ಲಾಠಿ ಬೀಸಲು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಎಲ್ಲರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ನೀಡಲು ಮುಂದಾಗುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಮರು. ಮೀಸಲಾತಿ ಕೊಡುವುದು ಹೇಗೆ ಸಂವಿಧಾನ ವಿರೋಧಿಯಾಗುತ್ತೆ? ಎಂದು ಪ್ರಶ್ನಿಸಿ ಗುಡುಗಿದ್ದಾರೆ.
ಲಿಂಗಾಯತರಿಗೆ, ಒಕ್ಕಲಿಗರಿಗೆ, ಮರಾಠರಿಗೆ ಮೀಸಲಾತಿ ಕೊಡಲ್ಲ ಅಂತ ಘೋಷಣೆ ಮಾಡಲಿ. ಸಂವಿಧಾನದ ವಿರುದ್ಧವಾಗಿ ಮುಸ್ಲಿಮರಿಗೆ ಮೀಸಲಾತಿ ಕೊಡಲಾಗಿದೆ. ಸಿಎಂ ಪ್ರಕಾರ ಮುಸ್ಲಿಂರು ಬಿಟ್ಟು ಬೇರೆ ಯಾರು ಏನು ಕೇಳಬಾರದು, ಏನೇ ಕೇಳಿದರೂ ಮುಸ್ಲಿಮರಷ್ಟೇ ಕೇಳಬೇಕು ಎಂದು ಆರೋಪಿಸಿದ್ದಾರೆ.
ಶೇ. 36 ಒಬಿಸಿ ಮೀಸಲಾತಿ ಇದೆ. ಅದರಲ್ಲಿ ಶೇ. 23 ಮುಸ್ಲಿಂ ಸಮಾಜಕ್ಕಿದೆ. ಧರ್ಮ ಆಧಾರಿತ ಮೀಸಲಾತಿ ಇಲ್ಲ ಅಂತ ಅಂಬೇಡ್ಕರ್ ಸಂವಿಧಾನ ಹೇಳಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಆಧಾರದ ಮೇಲೆ ಮೀಸಲಾತಿ ಇದೆ.
ಸಂಪೂರ್ಣ ಮುಸ್ಲಿಂ ಅಂತ ನಾಲ್ಕು ಪರ್ಸೆಂಟ್ ಕೆಟೆಗೆರಿ ಮಾಡಿದ್ದಾರೆ. ಕೆಟೆಗೆರಿ 2ಎ ದಲ್ಲಿ ಶೇ. 18 ರಷ್ಟು ಮುಸ್ಲಿಂಗೆ ನೀಡಿದ್ದಾರೆ. ಕೆಟೆಗೆರಿ 1ರಲ್ಲಿ ಮುಸ್ಲಿಂ ಸಮಾಜಕ್ಕೆ ನೀಡಿದ್ದಾರೆ. ಮುಸ್ಲಿಂಮರಿಗೆ ಶೇ. 23 ರಷ್ಟು ಕೊಟ್ಟರೆ ಬೇರೆಯವರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.