ಮುಂದಿನ ವರ್ಷದಿಂದ ಆರಂಭವಾಗಲಿರುವ ಐಪಿಎಲ್ ಹಂಗಾಮಾಗಾಗಿ ಈಗಾಗಲೇ ಎಲ್ಲ ತಂಡಗಳು ಆಟಗಾರರನ್ನು ಖರೀದಿಸಿವೆ. ಹಲವು ತಂಡಗಳು ಈಗಾಗಲೇ ನಾಯಕರನ್ನೂ ಆಯ್ಕೆ ಮಾಡಿವೆ. ಕಳೆದ ಬಾರಿ ಎಲ್ ಎಸ್ ಜಿ ತಂಡದ ನಾಯಕರಾಗಿದ್ದ ರಾಹುಲ್, ದೆಹಲಿ ಸೇರಿದ್ದಾರೆ. ಹಳೆಯ ತಂಡದ ಮಾಲೀಕ ಈಗ ಅವರನ್ನು ಹಾಡಿ ಹೊಗಳಿದ್ದಾರೆ.
ಕಳೆದ ಬಾರಿ ರಾಹುಲ್ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಪ್ರದರ್ಶನ ತೋರಲಿಲ್ಲ. ಪಂದ್ಯದ ವೇಳೆ ರಾಹುಲ್ ಹಾಗೂ ಲಕ್ನೋ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೊಯೆಂಕಾ ಮಧ್ಯೆ ಮೈದಾನದಲ್ಲೇ ವಾಗ್ವಾದ ನಡೆದಿತ್ತು. ಹೀಗಾಗಿ ರಾಹುಲ್ ತಂಡದಿಂದ ದೂರ ಉಳಿಯುವುದು ಖಚಿತವಾಗಿತ್ತು.
ನಿರೀಕ್ಷೆಯಂತೆ ತಂಡ ಕೂಡ ರಾಹುಲ್ ರನ್ನು ಕೈ ಬಿಟ್ಟಿತ್ತು. ತಂಡದ ಪರ ಮಾತನಾಡಿದ್ದ ಮಾಲೀಕ, ತನ್ನ ಹಿತಾಸಕ್ತಿಗಾಗಿ ಅಲ್ಲದೆ ತಂಡಕ್ಕಾಗಿ ಆಡುವ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ ಎಂದಿದ್ದರು.
ಈ ಹೇಳಿಕೆ ಕಂಡು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಹುಲ್ ಹಾಗೂ ಮಾಲೀಕರ ಮಧ್ಯೆ ಸಂಬಂಧ ಸರಿಯಿಲ್ಲ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಈಗ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಲಕ್ನೋ ತಂಡದ ಮಾಲೀಕ ಸಂಜೀವ್, ರಾಹುಲ್ ನಮ್ಮ ಕುಟುಂಬ ಸದಸ್ಯರು ಇದ್ದಂತೆ. ಮೂರು ವರ್ಷಗಳ ಕಾಲ ಲಕ್ನೋ ತಂಡದ ನಾಯಕತ್ವ ವಹಿಸಿದರು ಮತ್ತು ಅವರ ನಾಯಕತ್ವದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಿದರು.
ಅವರು ಮುಂದೆ ಸಾಗುವುದನ್ನು ನೋಡಲು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ರಾಹುಲ್ ಸಭ್ಯ ವ್ಯಕ್ತಿ. ರಾಹುಲ್ ಒಬ್ಬ ಪ್ರಾಮಾಣಿಕ ವ್ಯಕ್ತಿ ಮತ್ತು ಅವರಂತಹ ಪ್ರಾಮಾಣಿಕ ವ್ಯಕ್ತಿಯಿಂದ ಒಳ್ಳೆಯದಾಗಲಿದೆ ಎದಿದ್ದಾರೆ.