ಬೆಂಗಳೂರು: ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ನಲ್ಲೂರ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗಂಡನನ್ನು ಬಿಟ್ಟು ತನ್ನೊಂದಿಗೆ ಬಾರದ ಹಿನ್ನೆಲೆಯಲ್ಲಿ ಕೋಪಗೊಂಡ ಪ್ರಿಯಕರ ಮಿಥುನ್ ಮಂಡಲ್(40) ಎಂಬಾತ ತನ್ನ ಪ್ರೇಯಸಿ ಮೊವುಹಾ ಮಂಡಲ್(26) ಎಂಬ ಗೃಹಿಣಿಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಮಿಥುನ್, ಪ್ರೇಯಸಿಗೆ ಆಕೆಯ ಪತಿಯನ್ನು ಬಿಟ್ಟು ಬರುವಂತೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪದ ಹಿನ್ನಲೆಯಲ್ಲಿ ಕೋಪದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಆನಂತರ ಬಂಧನ ಭೀತಿಯಿಂದ ತಾನು ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇವರಿಬ್ಬರೂ ಪಶ್ಚಿಮ ಬಂಗಾಳ ಮೂಲದವವರು.ಇಬ್ಬರೂ ಹೌಸ್ ಕೀಪಿಂಗ್ ಕೆಲಸ ಮಡುತ್ತಿದ್ದರು. ಬೆಂಗಳೂರಿನಲ್ಲೇ ಪರಿಚಯವಾಗಿದ್ದ ಇಬ್ಬರಲ್ಲಿ ಪ್ರೀತಿ ಬೆಳೆದಿತ್ತು.