ಭಾರತೀಯ ಚೆಸ್ ಆಟಗಾರ ಗುಕೇಶ್ ಅವರು ಅತೀ ಚಿಕ್ಕ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಅತೀ ಕಿರಿಯ ವಯಸ್ಸಿನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ದಾಖಲೆ ಬರೆದಿದ್ದಾರೆ. ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿನ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆದ 2024 ರ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಆಟಗಾರ ಗೆದ್ದು ಬೀಗಿದ್ದಾರೆ.
ಭಾರತೀಯ ಆಟಗಾರ ಗುಕೇಶ್ ಅವರು ಟೂರ್ನಿಯಲ್ಲಿ ನಡೆದ ಕೊನೆಯ ಹಾಗೂ 14ನೇ ಗೇಮ್ ನಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೂಲಕ 18 ನೇ ವರ್ಷದಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿ ಡಿ ಗುಕೇಶ್ ಹೊರ ಹೊಮ್ಮಿದ್ದಾರೆ.