ಒಸಾಮಾ ಬಿನ್ ಲಾಡೆನ್ ಗೆ ಬಿಬಿಎಂ ಮೇಯರ್ ಚಾಲೆಂಜ್ ಮಾಡುವಂತೆ ಮಾತನಾಡಿದ್ದಾರೆ ಎಂದು ಪಾಲಿಕೆಯ ಅಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ವ್ಯಂಗ್ಯವಾಡಿದ್ದಾರೆ.
ಲಾಡೆನ್ ಕೆಡವಿದ ಕಟ್ಟಡವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದು ಬಿಬಿಎಂಪಿ ಮೇಯರ್ ಹೇಳಿಕೆ ನೀಡಿದ್ದಾರೆ. ಪಾಲಿಕೆ ಆವರಣದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ನಿರ್ಮಾಣ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.
ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ನಿರ್ಮಾಣ ಮಾಡಲಾಗುತ್ತದೆಂದು 2006-07ರಲ್ಲಿ ಪಾಲಿಕೆ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿತ್ತು. ಆ ವೇಳೆ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದರು. ಆ ಅವಧಿಯಲ್ಲಿ ಚಂದ್ರುಶೇಖರ್ ಮೇಯರ್ ಆಗಿದ್ದರು. ಇಲ್ಲಿಯವರೆಗೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೆಂಟರ್ ಗೆ ಗುದ್ದಲಿ ಪೂಜೆ ಕೂಡ ನಡೆದಿಲ್ಲ. ಆದರೆ, ಪಾಲಿಕೆ ಬಜೆಟ್ ನಲ್ಲಿ ಟ್ರೆಡ್ ಸೆಂಟರ್ ನಿರ್ಮಾಣಕ್ಕೆ ಎಂದು ಮೂರುವರೆ ಕೋಟಿ ರೂ. ಹಣ ಬಿಡುಗಡೆಯಾಗಿದೆ.
ವಲ್ಡ್ ಟ್ರೆಡ್ ಸೆಂಟರ್ ಗೆ ಅಂತ ಬಿಡುಗಡೆಯಾಗಿದ್ದ ಹಣ ಅಂದಿನ ಮೇಯರ್ ತಮ್ಮ ವಾರ್ಡ ಅಭಿವೃದ್ಧಿ ಗೆ ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎನ್.ಆರ್. ರಮೇಶ್ ಅವರು ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಲಾಗಿದೆ. ಟ್ರೆಡ್ ಸೆಂಟರ್ ಅನ್ನೇ ನೆಪವಾಗಿಟ್ಟುಕೊಂಡು ವರ್ಲ್ಡ್ ಬ್ಯಾಂಕ್ ನಲ್ಲಿ ಕೂಡ ಸಾಲ ಪಡೆಯಲಾಗಿದೆ. ಒಟ್ಟು 130 ಕೋಟಿ ರೂ. ಸಾಲ ಪಡೆದು ಮರಳಿ ಹಿಂದಿರುಗಿಸಿಲ್ಲ ಎಂದು ಕೂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.