ಅಲ್ಲು ಅರ್ಜುನ್ ನಟಿಸಿರುವ ‘ಪುಷ್ಪ 2’ ಚಿತ್ರಕ್ಕೆ ಅಭಿಮಾನಿಗಳು ಮೆಚ್ಚುಗೆ ಗಳಿಸಿದ್ದು, ಭಾರೀ ಕಲೆಕ್ಷನ್ ನತ್ತ ಮುಖ ಮಾಡಿದೆ ಎಂಬುವುದು ಬಾಕ್ಸ್ ಆಫೀಸ್ ನಿಂದ ತಿಳಿದು ಬರುತ್ತಿದೆ.
ಪುಷ್ಪ 2 ಚಿತ್ರ ನಿರ್ಮಿಸಿದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತವಾಗಿ ಹಂಚಿಕೊಂಡ ಮಾಹಿತಿಯಂತೆ, ಜಗತ್ತಿನಾದ್ಯಂತ ಮೊದಲ ದಿನ 295 ಕೋಟಿ ರೂ. ಗಳಿಕೆ ಮಾಡಿದೆ. ಅಂಕಿ-ಅಂಶಗಳನ್ನು ಗಮನಿಸಿದರೆ ಭಾರತೀಯ ಚಿತ್ರ ರಂಗದಲ್ಲಿ ಯಾವೊಂದು ಚಿತ್ರವೂ ಇಷ್ಟೊಂದು ಹಣವನ್ನು ಮೊದಲ ದಿನ ಗಳಿಕೆ ಮಾಡಿಲ್ಲ.
‘ಪುಷ್ಪ 2’ ಸಿನಿಮಾದ ಎರಡನೇ ದಿನದ ವಿಶ್ವ ಬಾಕ್ಸ್ ಕಲೆಕ್ಷನ್ ಒಟ್ಟು 449 ಕೋಟಿ ರೂ. ಆಗಿದೆ. ಅಂದರೆ ಎರಡನೇ ದಿನ 155 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ 450 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಪುಷ್ಪ 2’ ಸಿನಿಮಾ ಸಾಕ್ಷಿಯಾಗಿದೆ. ಹಿಂದೆ ‘ಆರ್ಆರ್ಆರ್’ ಸಿನಿಮಾ ವೇಗವಾಗಿ 500 ಕೋಟಿ ರೂ. ಗಳಿಕೆ ಮಾಡಿತ್ತು. ಸದ್ಯ ಆ ದಾಖಲೆಯನ್ನು ‘ಪುಷ್ಪ 2’ ಸಿನಿಮಾ ಮುರಿದಿದೆ. ಅಲ್ಲದೇ, ಮೂರು ಮತ್ತು ನಾಲ್ಕನೇ ದಿನಗಳು ವೀಕೆಂಡ್ ಆಗಿದ್ದು, ಚಿತ್ರವು ಇನ್ನೂ ಹೆಚ್ಚಿನ ಗಳಿಕೆ ಮಾಡುವ ಸಾಧ್ಯತೆ ಇದೆ.
‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಮುನ್ನವೇ 1000 ಕೋಟಿ ರೂ. ಹಣ ಗಳಿಕೆ ಮಾಡಿತ್ತು. ಈಗ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ವೇಗವಾಗಿ 400 ಕೋಟಿ ರೂ. ಮಾರ್ಕ್ ದಾಟಿದೆ. ಈಗ ಪ್ರದರ್ಶನದಿಂದಲೂ ಈ ಸಿನಿಮಾ 1000 ಕೋಟಿ ಗಳಿಸುವತ್ತ ದಾಪುಗಾಲು ಹಾಕಿದೆ. ಅಭಿಮಾನಿಗಳಂತೂ ಈ ಚಿತ್ರವನ್ನು ಮೆಚ್ಚಿಕೊಂಡಿದ್ದು, ಚಿತ್ರವು ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.