ಡಿಸಿಎಂ ಡಿಕೆ ಶಿವಕುಮಾರ್ ಅವರ ತವರೂರಿಗೆ ಹೊಸ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಅಸ್ತು ಎನ್ನಲಾಗಿದೆ.
ಕನಕಪುರ ರಸ್ತೆಯಲ್ಲಿ ಮೆಟ್ರೋ ಹಾದು ಹೋಗಿರುವ ಹಿನ್ನೆಲೆಯಲ್ಲಿ ಪ್ರಮುಖ ಜಂಕ್ಷನ್ ಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸುವುದಕ್ಕಾಗಿ ಹೊಸ ಎಕ್ಸ್ ಪ್ರೆಸ್ ವೇ ನಿರ್ಮಿಸಲು ಮುಂದಾಗಲಾಗಿದೆ.
ಈ ನಿರ್ಧಾರಕ್ಕೆ ಖುದ್ದು ಡಿಕೆಶಿ ಅಸ್ತು ಎಂದಿದ್ದಾರೆ. ಹೀಗಾಗಿ ಪಾಲಿಕೆಯು ಹೊಸ ಡಿಪಿಆರ್ ಸಿದ್ಧತೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬನಶಂಕರಿ ದೇವಾಲಯದ ಹಿಂದೆ ಬರುವ ಕಾವೇರಿ ಪೈಪ್ ಲೈನ್ ಪಕ್ಕದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇಲ್ಲಿ ಸುಮಾರು 10 ಕಿ.ಮೀ ಉದ್ದದ ಎಕ್ಸ್ ಪ್ರೆಸ್ ವೇ ನಿರ್ಮಾಣವಾಗಲಿದೆ. ಬನಶಂಕರಿಯಿಂದ ನೈಸ್ ರಸ್ತೆವರೆಗೂ ಎಕ್ಸ್ ಪ್ರೆಸ್ ವೇ ವರೆಗೂ ಇದು ನಿರ್ಮಾಣವಾಗಲಿದೆ. ಸುಮಾರು 1200 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.