ಬೆಂಗಳೂರು: ಮಾಲೀಕನೊಬ್ಬ ಸಾಕು ನಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ನಗರದ ಪುಟ್ಟೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ನಾಯಿಯ ಮಾಲೀಕ ಕರಣ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಆರೋಪಿಯು ಪ್ರತಿ ದಿನ ಬೆಳಗ್ಗೆ ಸಾಕು ನಾಯಿ ರಾಟ್ ವಿಲ್ಲರ್ ಜೊತೆ ವಾಕಿಂಗ್ ಗೆ ತೆರಳುತ್ತಿದ್ದ. ಇಂದು ಬೆಳಗ್ಗೆ ಕೂಡ ವಾಕಿಂಗ್ ಗೆ ಹೋಗಿದ್ದ. ಈ ವೇಳೆ ಅದು ಮಾಲೀಕನಿಗೆ ಕಚ್ಚಿದೆ. ಆಗ ಕೋಪದಲ್ಲಿ ನಾಯಿಗೆ ಜೋರಾಗಿ ಹೊಡೆದಿದ್ದಾನೆ.
ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.