ಪುಷ್ಪ 2’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಂಗಾಮ ಭರ್ಜರಿ ಹಂಗಾಮ ಸೃಷ್ಟಿಸಿದೆ.
ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದೆ. ಈ ಮೂಲಕ ಹಲವು ದಾಖಲೆಗಳನ್ನು ಮುರಿದು ಮುಂದೆ ಸಾಗಿದೆ.
ಪುಷ್ಪ 2’ ಸಿನಿಮಾ ಡಿ. 5ಕ್ಕೆ ತೆರೆಗೆ ಅಪ್ಪಳಿಸಿದೆ. ಬಿಡುಗಡೆಗೂ ಮುನ್ನ ಈ ಚಿತ್ರದ ಪ್ರೀಮೀಯರ್ ಶೋ ಬಿಡುಗಡೆಯಾಗಿತ್ತು. ಇದರಿಂದ 10 ಕೋಟಿ ರೂ. ಬಂದಿತ್ತು. ಡಿಸೆಂಬರ್ 5ರಂದು ಚಿತ್ರಕ್ಕೆ 165 ಕೋಟಿ ರೂ. ಕಮಾಯಿ ಮಾಡಿದೆ. ಇಲ್ಲಿಯವರೆಗೆ ಚಿತ್ರದ ಒಟ್ಟು ಕಲೆಕ್ಷನ್ 175 ಕೋಟಿ ರೂ. ಆಗಿದೆ. ವಿಶ್ವದ ಬಾಕ್ಸ್ ಆಫೀಸ್ ಎಲ್ಲ ಲೆಕ್ಕಾಚಾರ ಮಾಡಿದರೆ, ಚಿತ್ರವು 250 ಕೋಟಿ ರೂ. ಗಳಿಸಿದೆ. 175 ಕೋಟಿ ರೂ. ಪೈಕಿ 95.1 ಕೋಟಿ ರೂ. ತೆಲುಗಿನಿಂದ, 67 ಕೋಟಿ ರೂ. ಹಿಂದಿಯಿಂದ, 7 ಕೋಟಿ ರೂ. ತಮಿಳಿನಿಂದ, 5 ಕೋಟಿ ರೂ. ಮಲಯಾಳಂನಿಂದ ಹಾಗೂ 1 ಕೋಟಿ ರೂ. ಕನ್ನಡದಿಂದ ಚಿತ್ರಕ್ಕೆ ಸಿಕ್ಕಿದೆ. ಹಲವರು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.