ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಮನೆಗಳಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ.
ಈ ಘಟನೆ ಡಿಜೆ ಹಳ್ಳಿಯ ಆನಂದ್ ಥಿಯೇಟರ್ ಹತ್ತಿರ ನಡೆದಿದೆ. ಗ್ಯಾಸ್ ಸೋರಿಕೆಯಿಂದಾಗಿ (Gas Leakage) ಸಿಲಿಂಡರ್ ಸ್ಫೋಟಗೊಂಡಿವೆ (Cylinder Blast) ಎನ್ನಲಾಗಿದೆ. ಹೀಗಾಗಿ 3 ಮನೆಗಳಿಗೆ ಬೆಂಕಿ ಬಿದ್ದಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ.
ಪತಿ ನಾಜೀರ್, ಪತ್ನಿ ಕುಲ್ಸುಮ್ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಜೀರ್ ಪಾನಿಪುರಿ ವ್ಯಾಪಾರಿ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಮೂರೂ ಮನೆಗಳು ಪುಡಿಪುಡಿಯಾಗಿವೆ.
ರೆಗ್ಯುಲೇಟರ್ ಆನ್ ಆಗಿದ್ದರಿಂದ ಗ್ಯಾಸ್ ಲೀಕೇಜ್ ಆಗಿ ಈ ದುರ್ಘಟನೆ ಸಂಭವಿಸಿದೆ. ಡೇಟ್ ಬಾರ್ ಆಗಿದ್ದ ರೆಗ್ಯುಲೇಟರ್ ನ್ನೇ ಬಳಕೆ ಮಾಡುತ್ತಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.