ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal), ಬಸವಣ್ಣನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರಿಗೆ ಕೊನೆಗೆ ಏನಾಗಿತ್ತು ಅಂತ ನಮಗೆ ಗೊತ್ತಿದೆ. ಸತ್ಯ ಜನರಿಗೆ ಗೊತ್ತಿದೆ. ಸಾವಿರಾರು ವರ್ಷದಿಂದ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ವಿಭೂತಿ ಹಚ್ಕೊಂಡು ಓಡಾಡುವವರು ಬಸವಣ್ಣನಿಗೆ ಏನಾದರೂ ಮಾಡಿದಾರಾ? ವೀರಶೈವ ಮಹಾಸಭಾದಾಗ ಏನು ಮಾಡಿದಾರೆ. ಮೊದಲು ಶಿವಾನುಭವ ಮಂಟಪದ ಕುರಿತು ಹೋರಾಟ ಮಾಡಿ ಎಂದಿದ್ದಾರೆ.
ಬಸವಣ್ಣನವರ ಶಿವಾನುಭವ ಮಂಟಪದಲ್ಲೇ ದನ ಕಡಿಯುತ್ತಿದ್ದಾರೆ. ಅಖಿಲಭಾರತ ವೀರಶೈವ ಮಹಾ ಸಭಾದಲ್ಲಿ ಈಶ್ವರ ಖಂಡ್ರೆ ಏನು ಮಾಡುತ್ತಿದ್ದಾರೆ. ಎಲ್ಲ ಡೊಂಗಿ ನಾಟಕ ಮಾಡುತ್ತಾ ಬಂದಿದ್ದಾರೆ. ಬಸವಣ್ಣನವರ ಇತಿಹಾಸ ಏನಿದೆ, ಗಾಂಧಿಜೀ ನಾ ಯಾರು ಹೊಡೆದರು. ಬಸವಣ್ಣನವರರನ್ನು ಯಾರು ಹೊಡೆದರು, ಅಂಬೇಡ್ಕರ್ಗೆ ಎಷ್ಟು ಅಪಮಾನ ಮಾಡಿದರು ಎಂಬ ಚರ್ಚೆಗಳಿವೆ. ಚರ್ಚೆಗೆ ಬೇಕಾದರೆ ಬಾ ಅಂತ ಹೇಳಿ. ಅದು ಬಿಟ್ಟು ವಾಟ್ಸಾಪ್ನಲ್ಲಿ ಮಂಗನಂತೆ ಮಾತಾಡಿದರೆ ಆಗಲ್ಲ ಎಂದು ಗುಡುಗಿದ್ದಾರೆ.