ಬೆಳಗಾವಿ: ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಸಿಪಿಐ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬೆಳಗಾವಿಯ ಉದ್ಯಮಬಾಗ ಠಾಣೆ ಸಿಪಿಐ ಧರೇಗೌಡ ಪಾಟೀಲ್ ವಿರುದ್ಧ ಕಾನ್ಸ್ ಟೇಬಲ್ ವಿಠ್ಠಲ್ ಮುನಿಹಾಳ ಆತ್ಮಹತ್ಯೆಗೆ ಮುಂದಾಗಿದ್ದರು. ಡೆತ್ ನೋಟ್ ಶೇರ್ ಮಾಡಿದ್ದ ವಿಠ್ಠಲ್ ಅವರನ್ನು ಕೂಡಲೇ ಸ್ನೇಹಿತರು ಹುಡುಕಿ ರಕ್ಷಣೆ ಮಾಡಿದ್ದಾರೆ.
ಹಫ್ತಾ ವಸೂಲಿ ಮಾಡುವ ಸಿಬ್ಬಂದಿಗೆ ರಾತ್ರಿ ಕರ್ತವ್ಯಕ್ಕೆ ಹಾಕಲ್ಲ. ರಜೆ ವಿಚಾರದಲ್ಲಿ ಸಿಪಿಐ ಧರೇಗೌಡ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ರಜೆ ಪಡೆದು ಹಿಂದಿರುಗಿದಾಗ ಅವಾಚ್ಯ ಶಬ್ದ ಬಳಲುತ್ತಿದ್ದಾರೆ. ಸಹೋದರಿ ಮದುವೆಗೆ ರಜೆ ಪಡೆದಿದ್ದಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಮೆಮೋ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲವು ವಿಷಯಗಳು ನನ್ನ ಮೊಬೈಲ್ನಲ್ಲಿ ಇದೆ. ಹೀಗಾಗಿ ಸಿಪಿಐ ಧರೇಗೌಡ ಪಾಟೀಲ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಕಾನ್ಸ್ಟೇಬಲ್ ವಿಠ್ಠಲ್ 15 ಪುಟಗಳ ಡೆತ್ ನೋಟ್ ಬರೆದಿದ್ದರು. ಸದ್ಯ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.