ಕಲಬುರಗಿ: ಪೆಟ್ರೋಲ್ ಬಾಂಬ್ ಹಾಕಿ ಇಡೀ ಕುಟುಂಬವನ್ನು ಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಾಂಬ್ ಹಾಕಿ ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನ ನಡೆದಿದೆ. ಈ ಘಟನೆ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ. ಗುಂಡೆರಾವ್ ಕುಟುಂಬ ಹತ್ಯೆಗೆ ಶಿವಲಿಂಗಪ್ಪ ಕರಿಕಲ್ ಯತ್ನಿಸಿದ್ದಾರೆ ಎನ್ನಲಾಗಿದೆ.
ಬೆಂಕಿ ಹಚ್ಚಿ ಕುಟುಂಬದ ಬಾಗಿಲು ಬಂದ್ ಮಾಡಲಾಗಿತ್ತು. ಕೂಡಲೇ ಸ್ಥಳೀಯರು ಬಾಗಿಲು ಮುರಿದು ಕುಟುಂಬಸ್ಥರನ್ನು ರಕ್ಷಿಸಿದ್ದಾರೆ. ಮನೆ ಬಾಗಿಲು ಮುರಿದು ಕುಟುಂಬಸ್ಥರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಹೀಗಾಗಿ ಭಾಗಶಃ ಮನೆ ಸುಟ್ಟು ಕರಕಲಾಗಿದೆ. ಸದ್ಯ ಅಸ್ವಸ್ಥಗೊಂಡ ಕುಟುಂಬಕ್ಕೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡೆರಾವ್ ಗೆ ಶಿವಲಿಂಗಪ್ಪ 4 ಎಕರೆ ಜಮೀನು ಮಾರಾಟ ಮಾಡಿದ್ದ. ಶಿವಲಿಂಗಪ್ಪ 4 ವರ್ಷದ ಹಿಂದೆ 13 ಲಕ್ಷ ರೂ. ಅಡ್ವಾನ್ಸ್ ಪಡೆದಿದ್ದರು. ನಂತರ ಜಮೀನು ನೋಂದಣಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಜಮೀನು ನೋಂದಣಿ ಮಾಡಿಕೊಡಲು ವಿರೋಧಿಸಿದ್ದಾರೆ. ಇದೇ ವಿಚಾರವಾಗಿ ಜಗಳ ನಡೆದು, ಈ ಘಟನೆ ನಡೆದಿದೆ.