ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಮಂಡನೆಗೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ನಿರ್ಧಾರ ಮುಂದೂಡುವ ಸಾಧ್ಯತೆ ಇದೆ.
ಈಗ ಜಂಟಿ ಸಂಸದೀಯ ಸಮಿತಿಯು ( Joint Parliamentary Committee ) ಬಿಲ್ ಮಂಡನೆಗೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಮನವಿ ಮಾಡಿದೆ. ಲೋಕಸಭೆಯಲ್ಲಿ ಈ ಬಿಲ್ ಮಂಡನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ತರಾತುರಿಯಲ್ಲಿ ಬಿಲ್ ಮಂಡನೆಗೆ ನಿರ್ಧರಿಸಿದ್ದಾರೆ ಎಂದು ವಿಪಕ್ಷಗಳ ನಾಯಕರು, ಸಭೆಯಿಂದ ಹೊರ ನಡೆದಿದ್ದರು. ಹೀಗಾಗಿ ಬಿಲ್ ಮಂಡನೆಗೆ ಹೆಚ್ಚುವರಿ ಕಾಲಾವಕಾಶವನ್ನು ಕೇಳಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಈಗ ನಡೆಯುತ್ತಿರುವ ಪ್ರಕ್ರಿಯೆಗಳು ಸಂವಿಧಾನವನ್ನೇ ಅಣಕಿಸುವಂತಿದೆ ಎಂದು ವಿಪಕ್ಷಗಳು, ಸಭೆಯಿಂದ ಘೋಷಣೆಯನ್ನು ಕೂಗುತ್ತಾ ಹೊರ ನಡೆದಿದ್ದವು. ಇದೊಂದು ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಎಲ್ಲರಿಗೂ ಅವರವರ ವಿಚಾರಗಳನ್ನು ಮಂಡಿಸಲು ಸಮಯ ಬೇಕಾಗುತ್ತದೆ ಎಂದು ವಿಪಕ್ಷಗಳು, ಜೆಪಿಸಿ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.
ಇದಕ್ಕೂ ಮುನ್ನ ಜೆಪಿಸಿ ಸದಸ್ಯರಾದ ಕಾಂಗ್ರೆಸ್ಸಿನ ಸಂಸದ ಗೌರವ್ ಗೊಗೊಯಿ, ಡಿಎಂಕೆಯ ಎ.ರಾಜಾ, ಆಮ್ ಆದ್ಮಿಯ ಸಂಜಯ್ ಸಿಂಗ್ ಮತ್ತು ಟಿಎಂಸಿಯ ಕಲ್ಯಾಣ್ ಮುಖರ್ಜಿಯವರು, ಜಗದಾಂಬಿಕಾ ಪಾಲ್ ವಿರುದ್ದ ಪ್ರತಿಭಟನೆ ನಡೆಸಿದ್ದರು. ವಕ್ಫ್ ತಿದ್ದುಪಡಿ ಮಸೂದೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ನ.29ಕ್ಕೆ ಮಂಡನೆ ಮಾಡಲು ಜಗದಾಂಬಿಕಾ ಪಾಲ್ ನಿರ್ಧರಿಸಿದ್ದಾರೆ ಎಂದು ಪ್ರತಿಭಟಿಸಿದ್ದರು. ಹೀಗಾಗಿ ಬಿಲ್ ಮಂಡನೆಯಾಗುವುದು ತಡವಾಗಬಹುದು.