ಬೆಂಗಳೂರು : ನಗರದ ಹೊರ ವಲಯ ನೆಲಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಮೂರು ದಿನಗಳಲ್ಲಿ ಮೂರು ಚಿರತೆಯನ್ನು ಸೆರೆ ಹಿಡಿದಿದೆ.
ಇತ್ತೀಚೆಗಷ್ಟೇ ರೈತನೊಬ್ಬನ ಮೇಲೆ ದಾಳಿ ಮಾಡಿ ತಿಂದು ಹಾಕಿದ್ದವು. ಹೀಗಾಗಿ ಜನರು ಆತಂಕದಲ್ಲಿದ್ದರು. ಆದರೂ ಸುತ್ತಲಿನ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ಮಾಡಿದ ಚಿರತೆ, ರೈತನನ್ನು ಕೊಂದು ಹಾಕಿದ್ದವು. ಕೆಲಸ ಮಾಡಿ ರಾತ್ರಿ ವೇಳೆ ಬೈಕ್ ಹಾಗೂ ಇತರೆ ವಾಹನಗಳಲ್ಲಿ ತೆರಳುವಾಗ ಚಿರತೆಗಳು ಕಂಡಿದ್ದು, ಜನರು ಬೆಚ್ಚಿ ಬೀಳುತ್ತಿದ್ದರು.
ಹೀಗಾಗಿ ಅರಣ್ಯ ಇಲಾಖೆಗೆ ಚಿರತೆ ಹಿಡಿಯುವಂತೆ ಮನವಿ ಮಾಡಲಾಗಿತ್ತು. ಹೀಗಾಗಿ ಅಧಿಕಾರಿಗಳು ಬೋನು ಇಟ್ಟು ಬಲೆ ಬೀಸಿದ್ದರು. ಮೊದಲ ದಿನ ಒಂದು ಚಿರತೆ ಬೋನಿಗೆ ಬಿದ್ದಿದೆ. ಆದರೆ, ಬೋನಿನ ಸುತ್ತಲೂ ಚಿರತೆಯ ಹೆಜ್ಜೆಗಳನ್ನು ನೋಡಿದ ಅರಣ್ಯ ಅಧಿಕಾರಿಗಳು ಇಲ್ಲಿ ಕೇವಲ ಒಂದು ಚಿರತೆ ಇಲ್ಲ ಎನ್ನುವುದನ್ನು ಮನಗಂಡು, ಎರಡು ದಿನ ಬೋನ್ ಇಟ್ಟಿದ್ದು, ಒಟ್ಟು ಮೂರು ಚಿರತೆಗಳು ಸೆರೆಯಾಗಿವೆ. ಸದ್ಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.