ಮಂಗಳೂರು: ವ್ಯಕ್ತಿಯೊಬ್ಬರ ವಾಟ್ಸಾಪ್ ಗೆ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ.
ಈ ಕುರಿತು ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್ ಆ್ಯಪ್ ನಂಬರ್ ಗೆ +917878422870 ನಂಬರ್ ನಿಂದ ಮೆಸೆಜ್ ಬಂದಿತ್ತು. ಈ ಮೆಸೇಜ್ನಲ್ಲಿ VAHAN PARIVAHAN.apk ಎಂಬ ಫೈಲ್ ಬಂದಿದೆ. ಇದರಲ್ಲಿ KA 03 MA 0606 ಎಂಬ ವಾಹನ ಸಂಖ್ಯೆ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಇತ್ತು.
ಆದರೆ, ವಾಟ್ಸಾಪ್ ಬಳಕೆದಾರ ಫೈಲ್ ಡೌನ್ಲೋಡ್ ಮಾಡಿದ ಕೂಡಲೇ ಮೊಬೈಲ್ಗೆ 16 ಒಟಿಪಿಗಳು ಬಂದಿವೆ. ಅವುಗಳನ್ನು ಆತ ಯಾರಿಗೂ ಶೇರ್ ಮಾಡಿಲ್ಲ. ಆದರೆ, ಹಣ ಮಾತ್ರ ಗುಳಂ ಆಗಿದೆ. ಕ್ರೆಡಿಟ್ ಕಾರ್ಡ್ ಮುಖಾಂತರ 30,400 ರೂ ಹಾಗೂ ಡೆಬಿಟ್ ಕಾರ್ಡ್ ಮುಖಾಂತರ 16,700 ಮತ್ತು 71,496 ರೂ. ವರ್ಗಾವಣೆ ಆದ ಕುರಿತು ಮೊಬೈಲ್ ಗೆ ಮೆಸೇಜ್ ಬಂದಿದೆ. ಕೂಡಲೇ ತಮ್ಮ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನ್ನು ಬ್ಲಾಕ್ ಮಾಡಿದ್ದಾರೆ.