ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ (Byelection) ನಂತರ ಸಚಿವ ಸಂಪುಟ ಪುನರ್ ರಚನೆಯ ಮಾತುಗಳು ಕೇಳಿ ಬರುತ್ತಿವೆ.
ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಸುಳಿವು ನೀಡಿದ್ದಾರೆ. ಸೋನಿಯಾ ಗಾಂಧಿ ಅವರಂತವರೇ ಹುದ್ದೆಯನ್ನೇ ತ್ಯಾಗ ಮಾಡಿದ್ದಾರೆ. ನಾವು ಕೆಲ ಮಂತ್ರಿಗಳಿಗೂ 2 ವರ್ಷದೊಳಗೆ ಅಧಿಕಾರ ತ್ಯಾಗ ಮಾಡಬೇಕು ಎಂದು ಸಂದೇಶ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಹೀಗಾಗಿ ಸಚಿವ ಸಂಪುಟ ಪುನರ್ ರಚನೆಯ ಮಾತುಗಳು ಜೋರಾಗಿವೆ. ಈ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿದ್ದು, ಸಿಎಂ ಕೂಡ ದೆಹಲಿಗೆ ಪ್ರವಾಸದಲ್ಲಿದ್ದಾರೆ. ಅಲ್ಲದೇ, ನಾಡಿದ್ದು ಇಬ್ಬರೂ ನಾಯಕರು ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಂದು ವೇಳೆ ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ, ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಸಚಿವ ಸಂಪುಟ ಪುನರಚನೆಯಾಗುವ ಸಾಧ್ಯತೆ ಇದೆ. ಯಾವ ಯಾವ ಸಚಿವರಿಗೆ ಖಾತೆ ಬದಲಾವಣೆ ಮಾಡಬೇಕು ಮತ್ತು ಅತೃಪ್ತಗೊಂಡಿರುವ ಯಾವ ಹಿರಿಯ ನಾಯಕರನ್ನ ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುವುದರ ಕುರಿತು ರಾಹುಲ್‌ಗಾಂಧಿ ಜೊತೆ ಚರ್ಚೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.