ಬೆಂಗಳೂರು: ದೇವೇಗೌಡರ ಕುಟುಂಬದಲ್ಲಿ ಚೆನ್ನಮ್ಮ ಅವರನ್ನು ಹೊರತು ಪಡಿಸಿದರೆ ಎಲ್ಲರೂ ಅಭ್ಯರ್ಥಿಗಳೇ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಮುಸ್ಲಿಂರಿಗೆ ಮತದಾನದ ಹಕ್ಕು ನೀಡಬಾರದು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು 3 ಸಾವಿರ ನೋಟಿಸ್ ಕೊಟ್ಟಾಗ ಚಂದ್ರಶೇಖರ ಸ್ವಾಮೀಜಿ ಎಲ್ಲಿದ್ದರು. ಯಾವುದೇ ಸ್ವಾಮಿ ಏನೇ ಹೇಳಿಕೆ ಕೊಟ್ಟರು ಅದು ಅವರ ವಿರುದ್ಧ ಪೀಠಕ್ಕೆ ಧಕ್ಕೆ ಬರವಂತೆ ಮಾತನಾಡಬಾರದು. ಸ್ವಾಮೀಜಿಯವರೇ ವೋಟಿನ ಹಕ್ಕು ಕಿತ್ಕೊಳ್ಳಿ ಎಂದರೆ ಹೇಗೆ? ಇದರಿಂದ ನಿಮಗೆ ಸಿಕ್ಕಿದ್ದೇನು? ನಮಗೆ ಸೌತೆಕಾಯಿ ಮಾರೋದು ಇನ್ನೂ ತಪ್ಪಿಲ್ಲ ಎಂದು ಗುಡುಗಿದ್ದಾರೆ.
ನಮ್ಮನ್ನ ತೋರಿಸಿನೇ ಬಿಜೆಪಿಯವರು ಇಷ್ಟು ದಿನ ವೋಟ್ ತಕೊಂಡಿದ್ದು. ನಾವಿಲ್ಲ ಎಂದರೆ ಬಿಜೆಪಿಯೇ ಇರುವುದಿಲ್ಲ. ನಾವಿರುವುದರಿಂದ ನಿಮಗೆ ಗೌರವ. ಬಿಜೆಪಿಯವರು ಹೇಳಿದ್ದಾರೆಂದು ಏನೇನೋ ಮಾತನಾಡಬೇಡಿ ಎಂದು ಗುಡುಗಿದ್ದಾರೆ.
ವಕ್ಫ್ ಗೆ 50 ಎಕರೆ ಜಾಗ ಕೋಲಾರದಲ್ಲಿ ನಾನು ದಾನ ಕೊಟ್ಟಿದ್ದೆ. ನಾನು ವಕ್ಫ್ ಆಸ್ತಿ ಒಂದಿಂಚು ಕಬಳಿಸಿದ್ದರೂ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.