ಬೆಂಗಳೂರು: ವಕ್ಫ್ ವಿವಾದ (Waqf Dispute) ರಾಜ್ಯದಲ್ಲಿ ದೊಡ್ಡ ಮಟ್ಟದ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಒಕ್ಕಲಿಗ (Okkaliga) ಸಮುದಾಯದ ಚಂದ್ರಶೇಖರ ಸ್ವಾಮೀಜಿ (Candrashekhara Swamiji) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಕಿಸಾನ್ ಸಂಘಟನೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿ, ಪಾಕಿಸ್ತಾನದಲ್ಲಿ ಜಾರಿಯಾದಂತೆ ಭಾರತದಲ್ಲೂ ಕಾನೂನು ಜಾರಿಯಾಗಬೇಕು. ಭಾರತದಲ್ಲಿ ಮುಸ್ಲಿಮರಿಗೆ ಮತ ಚಲಾಯಿಸುವ ಹಕ್ಕನ್ನ ರದ್ದು ಮಾಡಬೇಕು ಎಂದು ಹೇಳಿದ್ದಾರೆ.
ವಕ್ಪ್ ಮಂಡಳಿ ಕಾನೂನು ಇಲ್ಲದೆ ಆಸ್ತಿ ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಇದರ ಬಗ್ಗೆ ಎಲ್ಲರೂ ಹೋರಾಟ ಮಾಡಬೇಕಿದೆ. ರೈತರು ಇದ್ದರೆ, ಜನ ಇರುತ್ತಾರೆ. ರೈತರು ಇಲ್ಲ ಅಂದ್ರೆ ಜನ ಇರುವುದಿಲ್ಲ. ಅನಾವಶ್ಯಕವಾಗಿ ವಕ್ಪ್ ಇನ್ನೊಬ್ನರ ಆಸ್ತಿಯನ್ನ ಕಿತ್ತುಕೊಳ್ಳುವುದು ಸರಿಯಲ್ಲ. ಹೀಗಾಗಿ ವಕ್ಫ್ ಮಂಡಳಿಯನ್ನೇ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.