ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ವಿವಾದವೇ ಸೃಷ್ಟಿಯಾಗಿದ್ದು, ಈಗ ಅರ್ಹ ಫಲಾನುಭವಿಗಳಿಗೆ ಸರ್ಕಾರ ಗುಡ್ ನ್ಯೂಸ್ (Good News) ನೀಡಿದೆ.
ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ನ. 28ರ ವರೆಗೆ ಸಮಸ್ಯೆಯನ್ನು ಸರಿಪಡಿಸಿ ಎಂದು ಸಚಿವರು ಹೇಳಿದ್ದಾರೆ. ಬಿಪಿಎಲ್ಗೆ ಅರ್ಹರಿದ್ದು, ಎಪಿಎಲ್ ಆಗಿದ್ರೆ ಅಂತವರಿಗೆ ಪುನರ್ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಸಚಿವ ಕೆ.ಎಚ್. ಮುನಿಯಪ್ಪ ಅವರು, ನ. 28ಕ್ಕೆ ಮತ್ತೆ ಡೆಡ್ ಲೈನ್ ನೀಡಿದ್ದಾರೆ. ಈ ಅವಧಿಯಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರೆ ಟೆನ್ಶನ್ ಬಿಡಿ. ಇನ್ನೂ 3ದಿನದ ಒಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ಹೇಳಿದ್ದಾರೆ.
ನವೆಂಬರ್ 28ರ ಒಳಗಡೆ ಸಮಸ್ಯಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಆದ್ರೆ, ಸಚಿವರು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಡುತ್ತಿರುವುದು ಅಧಿಕಾರಿಗಳು ಸಕಷ್ಟ ತಂದಿದೆ ಎನ್ನಲಾಗುತ್ತಿದೆ. ಈಗಾಗಲೆ ರಜೆ, ಟೈಮಿಂಗ್ ಕೂಡ ನೋಡದೆ ಅಧಿಕಾರಿಗಳು ಹಗಲು ರಾತ್ರಿ ಕೂಡ ಕೆಲಸ ಮಾಡುತ್ತಿದ್ದಾರೆ. 3 ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಅನರ್ಹರ ಕಾರ್ಡ್‌ಗಳನ್ನು ಪರೀಷ್ಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,50,59,431 ಒಟ್ಟು ಕಾರ್ಡ್ ಗಳಿವೆ. ಅವರಲ್ಲಿ ಆದಾಯ ತೆರಿಗೆ ಹಾಗೂ ಸರ್ಕಾರಿ ನೌಕರರು ಹೊಂದಿರುವ ಎಪಿಎಲ್ ಕಾರ್ಡ್ 1,02,509 ಕಾರ್ಡ್ ಗಳಿವೆ. ಈ ಪೈಕಿ 8447 ಮಾತ್ರ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದೆ.