ಬೀದರ್: ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ವಕ್ಫ್ ಮಾಡಲು ಹೊರಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಅವರು, ವಕ್ಫ್ ವ್ಯಾಪ್ತಿಯಲ್ಲಿ ಸುಮಾರು 32 ಸಾವಿರ ಎಕರೆ ಜಮೀನು ಇದೆ ಎಂದು ಸಚಿವ ಜಮೀರ್ ಹೇಳ್ತಾರೆ. ಬೀದರ್, ಬಿಜಾಪುರದಲ್ಲೇ ಅಷ್ಟು ಆಸ್ತಿ ಇದೆ, ಹಾಗಾದ್ರೆ ಉಳಿದ ಜಮೀನು ಎಲ್ಲಿ ಹೋಯ್ತು? ಎಂದು ಬೀದರ್‌ಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಇವರು ರಾಜ್ಯಗಳನ್ನೇ ವಕ್ಫ್ ಮಾಡಲು ಹೊರಟಿದ್ದಾರೆ. ವಕ್ಫ್ ಹೆಸರೇಳಿ ಗುಡಿ, ಮಠ, ಮಂದಿರಗಳನ್ನೇ ಗುಡಿಸಿ ಗುಂಡಾಂತರ ಮಾಡಲು ಹೊರಟಿದ್ದಾರೆ. ನಮ್ಮ ಬಿಜಾಪುರ ಜಿಲ್ಲೆಯಲ್ಲಿ ಆರು ಸಾವಿರ ಎಕರೆ ವಕ್ಫ್ ಎಂದು ಮಾಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಹಳ್ಳಿಯನ್ನೇ ವಕ್ಫ್ ಮಾಡಿದ್ದಾರೆ. ಟ್ರಿಬ್ಯುನಲ್ ಅನ್ನೇ ವಜಾ ಮಾಡಬೇಕು. ಹೀಗಾಗಿ ನಮ್ಮ ಹೋರಾಟ ನಡೆಯುತಿದ್ದು, ವಕ್ಫ್ ಕೀಳುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದಿದ್ದಾರೆ.