ಮೈಸೂರು : ಕಾಂಗ್ರೆಸ್ ಗೆದ್ದಿದೆ ಎಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ಆಪಾದನೆಗಳಿಂದ ದೂರ ಆಗಲ್ಲ. ಮುಡಾ, ವಾಲ್ಮೀಕಿ ಹಗರಣಕ್ಕೆ ಇದು ಉತ್ತರವಲ್ಲ. ಹೀಗಾಗಿ ನಾವು ಗೆದ್ದಿದ್ದೇವೆಂದು ಯಾರೂ ಬೀಗಬೇಕಿಲ್ಲ ಎಂದು ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿದ್ದ ಮೂರು ಕ್ಷೇತ್ರಗಳ ಉಪ ಚನಾವಣೆಯಲ್ಲಿ ಮೂರು ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆದಿದ್ದೆ. ಉಪಚುನಾವಣೆಗಳು ಯಾವತ್ತೂ ಕೂಡಾ ಶಿಫಾರಸಿನ ಮೇಲೆ, ದುಡ್ಡಿನ ಮೇಲೆ, ಜಾತಿಯ ಮೇಲೆ ಹಾಗೂ ಅಧಿಕಾರದ ಆಶಯದ ಮೇಲೆ ನಡೆಯುತ್ತದೆಯೇ ಹೊರತು, ಯಾವುದೇ ತತ್ವ – ಸಿದ್ದಾಂತ ಕಾರ್ಯಕ್ರಮಗಳ ಮೇಲೆ ನಡೆಯುವುದಿಲ್ಲ. ಹೀಗಾಗಿ ಯಾರೂ ಬೀಗಬಾರದು. ಇದು ದುಡ್ಡಿಗೆ ಸಿಕ್ಕ ಅಂಕ. ಶಿಗ್ಗಾಂವಿ, ಸಂಡೂರು ದೂರದಲ್ಲಿವೆ. ಹೀಗಾಗಿ ಅಲ್ಲಿ ಮುಡಾ ಪ್ರಭಾವ ಬೀರಿಲ್ಲ ಎಂದಿದ್ದಾರೆ.
ಕೋಟ್ಯಂತರ ರೂ ದುಡ್ಡು ಕೊಟ್ರಿ. ಸೀರೆ, ಹಣ, ಹೆಂಡ ಇವು ಇದ್ದೇ ಇರುತ್ತವೆ. ಸಿದ್ದರಾಮಯ್ಯನ ಕಾಲದಲ್ಲಿ ಅಂತ ಅಲ್ಲ, ಎಲ್ಲರ ಕಾಲದಲ್ಲಿಯೂ ಇವೆ ಎಂದು ಹೇಳಿದ್ದಾರೆ.