ಶಿವಮೊಗ್ಗ: ಕಾಂಗ್ರೆಸ್ ಸರ್ಕಾರವು ಮತಗಳಿಗಾಗಿ ಏನು ಬೇಕಾದರೂ ಮಾಡುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮತಗಳ ತುಷ್ಠೀಕರಣ ಮಾಡುವುದೇ ಕಾಂಗ್ರೆಸ್ ನ ಕೆಲಸ. ದೇಶದ ಧ್ವಜದಲ್ಲಿ ಕೇಸರಿ ಬಿಳಿ ಹಸಿರು ಇದ್ದರು ಸಹ ಹಸಿರನ್ನು ಮಾತ್ರ ಪ್ರೀತಿಸುವ ಕೆಲಸ ಕಾಂಗ್ರೆಸ್ ನಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ರೈತರ ಭೂಮಿ ಸರ್ವೆ ಮಾಡಿ ಕೊಡಲು ರಾಜ್ಯ ಸರ್ಕಾರಕ್ಕೆ ಸಮಯವಿಲ್ಲ. ಆದರೆ ವಕ್ಫ್ ಭೂಮಿ ಸುಮಾರು 27 ಸಾವಿರ ಹೆಕರೆ ಸರ್ವೆ ಮಾಡಿ ಕೊಡಲು ತ್ವರಿತವಾಗಿ ಕ್ರಮಕೈಗೊಳ್ಳಲಾಗಿದೆ ಎಂದು ಗುಡುಗಿದ್ದಾರೆ.