ಬಾಗಲಕೋಟೆ: ಹೇರ್ ಡ್ರೈಯರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮಾಜಿ ಯೋಧರ ಪತ್ನಿ ಕೈ ಕಳೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ವೊಂದು ಸಿಕ್ಕಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಆದರೆ, ಈ ಘಟನೆಯ ಸುದ್ದಿ ಕೇಳಿ ಜನರು ಬೆಚ್ಚಿ ಬಿದ್ದಿದ್ದರು. ಈಗ ಇದರ ಹಿಂದೆ ಕೊಲೆಯ ಸಂಚಿದ್ದ ವಿಷಯ ಬಹಿರಂಗವಾಗಿದೆ. ಘಟನೆಯಲ್ಲಿ ಮೃತ ಯೋಧರೊಬ್ಬ ಪತ್ನಿ ಬಸವರಾಜೇಶ್ವರಿ ಯರನಾಳ (35) ಎಂಬುವವರು ಎರಡು ಕೈ ಕಟ್ ಆಗಿದ್ದವು.
ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತರ ಎಂಬುವವರ ಮಧ್ಯೆ ಪ್ರೀತಿ ಇತ್ತು ಎನ್ನಲಾಗಿದೆ. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು. ಇದು ಸರಿಯಲ್ಲ ಎಂದು ಹೇಳಿದ್ದಳು. ಹೀಗಾಗಿ ಬಸವರಾಜೇಶ್ವರಿ ಅವರು ಸಿದ್ದಪ್ಪ ಜೊತೆ ಮಾತನಾಡುವುದನ್ನು ಬಿಟ್ಟಿದ್ದಳು. ಹೀಗಾಗಿ ಸಿದ್ದಪ್ಪನಿಗೆ ಶಶಿಕಲಾ ಮೇಲೆ ಕೋಪ ಬಂದಿದೆ. ಹೀಗಾಗಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.
ಕೊಲೆ ಮಾಡುವ ಸಂಚಿನ ಹಿನ್ನೆಲೆಯಲ್ಲಿ ಶಶಿಕಲಾ ಅವರನ್ನು ಮುಗಿಸುವುದಕ್ಕಾಗಿ ಅವರ ಹೆಸರಿನಲ್ಲಿ ಗ್ರಾನೈಟ್ ಡೆಟೊನೇಟರ್ ಡ್ರೈಯರ್ನಲ್ಲಿ ಅಳವಡಿಸಿ ಅವರ ಹೆಸರಿನಲ್ಲಿ ಕೋರಿಯರ್ ಮಾಡಿದ್ದಾನೆ. ಆದರೆ, ಕೋರಿಯರ್ ಬಂದ ದಿನ ಶಶಿಕಲಾ ಅವರು ಊರಲ್ಲಿ ಇರಲಿಲ್ಲ. ಹೀಗಾಗಿ ಪ್ರೇಯಸಿ ಬಸವರಾಜೇಶ್ವರಿ ಅದನ್ನು ತೆಗೆದುಕೊಂಡು ಪರಿಶೀಲಿಸುವುದಕ್ಕಾಗಿ ಸ್ವಿಚ್ ಹಾಗಿ ಆನ್ ಮಾಡಿ, ಕೈ ಕಳೆದುಕೊಳ್ಳುವಂತಾಗಿದೆ.
ಸಿದ್ದಪ್ಪ ಡಾಲ್ಫಿನ್ ಎಂಬ ಹೆಸರಿನ ಗ್ರಾನೈಟ್ ಕಂಪನಿಯಲ್ಲಿ 16 ವರ್ಷದಿಂದ ಕೆಲಸ ಮಾಡುತ್ತಿದ್ದ. ಆತನಿಗೆ ಡೆಟೊನೇಟರ್ ಸ್ಪೋಟದ ಬಗ್ಗೆ ಮಾಹಿತಿಯಿತ್ತು. ಹೀಗಾಗಿ ಅದನ್ನು ಕಳುಹಿಸಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.