ಬೆಂಗಳೂರು: ಇಲ್ಲಿಯ ರಾಜಾಜಿನಗರದ ರಸ್ತೆಯಲ್ಲಿರುವ ಮೈ ಇವಿ ಸ್ಟೋರ್ ಹೆಸರಿನ ಶೋರೂಂನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋರೂಂನ ಮಾಲೀಕ ಹಾಗೂ ವ್ಯವಸ್ಥಾಪಕನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶೋರೂಂ ಮಾಲೀಕ ಎಚ್.ಜಿ.ಪುನೀತ್(36) ಹಾಗೂ ವ್ಯವಸ್ಥಾಪಕ ಜಿ.ಯುವರಾಜ್(30) ಬಂಧಿತರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹಾಸನ ಮೂಲದ ಪುನೀತ್‌ಗೌಡ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಇ.ವಿ ಎಲೆಕ್ಟ್ರಿಕ್ ಬೈಕ್ ಶೋರೂಂ ನಡೆಸುತ್ತಿದ್ದರು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ (27) ಸಜೀವ ದಹನಗೊಂಡಿದ್ದರು. ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ 25ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಸುಟ್ಟು ಕರಕಲಾಗಿವೆ.