ನವದೆಹಲಿ: ಜಾರ್ಖಂಡ್ ನ ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಎಕ್ಸಿಟ್ ಪೋಲ್ ಹೊರ ಬಿದ್ದಿದ್ದು, ಮಹಾರಾಷ್ಟ್ರದಂತೆ ಅಲ್ಲಿಯೂ ಬಿಜೆಪಿ ನೇತೃತ್ವಕ್ಕೆ ಜಯ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೆಲವು ಸಮೀಕ್ಷೆಗಳು ಮತ್ತೊಮ್ಮೆ ಜಾರ್ಖಂಡ್ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿವೆ.
ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು ಎನ್ಡಿಎಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಕೂಡ ಸಮೀಕ್ಷೆ ಹೇಳಿವೆ.
ಸಮೀಕ್ಷೆಯಂತೆ, ಮ್ಯಾಟ್ರಿಜ್ ಎನ್‌ಡಿಎಗೆ 42-47 ಸ್ಥಾನಗಳನ್ನು, ಇಂಡಿಯಾ ಬ್ಲಾಕ್‌ಗೆ 25-30 ಸ್ಥಾನಗಳನ್ನು ಮತ್ತು ಇತರರಿಗೆ 1-4 ಸ್ಥಾನಗಳನ್ನು ನೀಡಿದೆ. ಪೀಪಲ್ಸ್ ಪಲ್ಸ್ ಎನ್‌ಡಿಎಗೆ 44-53 ಸ್ಥಾನಗಳು, ಇಂಡಿಯಾ ಬ್ಲಾಕ್‌ಗೆ 25-37 ಮತ್ತು ಇತರರಿಗೆ 5-9 ಸ್ಥಾನ ಸಿಗಬಹುದು ಎಂದು ಭವಿಷ್ಯ ನುಡಿದಿವೆ.
ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಅದರ ಮೈತ್ರಿ ಪಾಲುದಾರ ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್‌ಯು) 10 ಸ್ಥಾನಗಳಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಎರಡು ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಒಂದರಲ್ಲಿ ಸ್ಪರ್ಧಿಸಿದೆ.
81 ಸದಸ್ಯ ಬಲದ ಜಾರ್ಖಂಡ್ ಅಸೆಂಬ್ಲಿ ಚುನಾವಣೆ ನವೆಂಬರ್ 13 ಮತ್ತು ನವೆಂಬರ್ 20ರಂದು 2 ಹಂತಗಳಲ್ಲಿ ನಡೆದಿತ್ತು.