ನವದೆಹಲಿ: ಮಹಾರಾಷ್ಟ್ರದಲ್ಲಿ ಇಂದು ಒಂದೇ ಹಂತದಲ್ಲಿ ಎಲ್ಲ ಕ್ಷೇತ್ರಗಳಿಗೆ ಚುನಾವಣೆ ಮುಕ್ತಾಯವಾಗಿದ್ದು, ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರ ಬಿದ್ದಿವೆ.
ಎಲ್ಲ ಸಮೀಕ್ಷೆಗಳಲ್ಲೂ ಮತದಾರರ ಒಲವು ಈ ಬಾರಿ ಕೂಡ ಮಹಾಯುತಿ ಪರವಾಗಿದೆ ಎಂದು ಎಕ್ಸಿಟ್ ಪೋಲ್ ಗಳು ಹೇಳಿವೆ. ಕಾಂಗ್ರೆಸ್ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿಗೆ ಮುಖಭಂಗವಾಗಬಹುದು ಎಂದು ಸಮೀಕ್ಷೆ ಹೇಳಿವೆ.
ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದೆ. ಸರ್ಕಾರ ರಚಿಸಲು ಪಕ್ಷ ಅಥವಾ ಮೈತ್ರಿಕೂಟ 145 ಸ್ಥಾನಗಳಲ್ಲಿ ಗೆಲ್ಲಬೇಕು. ಬಿಜೆಪಿ 149 ಸ್ಥಾನಗಳಲ್ಲಿ, ಶಿವಸೇನೆ 81 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದೆ. ಇನ್ನುಳಿದಂತೆ ವಿರೋಧ ಪಕ್ಷದ ಮೈತ್ರಿಯಲ್ಲಿ ಕಾಂಗ್ರೆಸ್ 101, ಶಿವಸೇನೆ (ಯುಬಿಟಿ) 95, ಮತ್ತು ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಎಕ್ಸಿಟ್ ಪೋಲ್ ಮಾಹಿತಿಯಂತೆ,
ಪಿ-ಮಾರ್ಕ್ ಸಮೀಕ್ಷೆಯಂತೆ ಬಿಜೆಪಿ ನೇತೃತ್ವದ ಮೈತ್ರಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ.
ಬಿಜೆಪಿ: 137-157
ಕಾಂಗ್ರೆಸ್: 126-146
ಇತರರು: 2-8
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಸಮೀಕ್ಷೆ:
ಮ್ಯಾಟ್ರಿಜ್ ಸಮೀಕ್ಷೆ ಕೂಡ ಬಿಜೆಪಿ ನೇತೃತ್ವಕ್ಕೆ ಜಯ ಎಂದಿದೆ.
ಬಿಜೆಪಿ: 150-170
ಕಾಂಗ್ರೆಸ್: 110-130
ಇತರರು: 08-10
ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್:
ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಕೂಡ ಮಹಾಯುತಿ ಪರವಾಗಿ ಹೇಳಿದೆ.
ಮಹಾಯುತಿ: 182 (175-195)
ಮಹಾವಿಕಾಸ್ ಅಘಾಡಿ: 97 (85-112)
ಇತರೆ: 9 (7-12)
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯಂತೆ ಮಹಾಯುತಿಗೆ ಜಯ ಇದೆ.
ಬಿಜೆಪಿ: 152-160
ಎಂವಿಎ: 130-138