ಬೆಂಗಳೂರು: ಅಲ್ಪಾವಧಿ ಕೃಷಿ ಸಾಲ ಮಂಜೂರು ಮಿತಿಯನ್ನು ನಬಾರ್ಡ್ ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಇದರಿಂದಾಗಿ ರೈತರು ಸಂಕಷ್ಟ ಪಡುವಂತಾಗಿದೆ.
ಹೀಗಾಗಿ ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ಮತ್ತು ರಿಯಾ ಯಿತಿ ಬಡ್ಡಿ ದರದ ಸಾಲ ಸೌಲಭ್ಯಕ್ಕೆ ಹೊಡೆತ ಬಿದ್ದಿದೆ. ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ 35 ಲಕ್ಷ ರೈತರಿಗೆ ಒಟ್ಟು 25 ಸಾವಿರ ಕೋಟಿ ರೂ. ಅಲ್ಪಾವಧಿ ಬೆಳೆಸಾಲ ವಿತರಿಸುವ ಗುರಿ ಇದರಿಂದಾಗಿ ವಿಫಲವಾಗುತ್ತಿದೆ.
ಹಿಂದಿನ ವರ್ಷ 5,600 ಕೋಟಿ ರೂ. ಇದ್ದ ಸಾಲದ ಮಿತಿಯನ್ನು ನಬಾರ್ಡ್ ಶೇ. 58 ಕಡಿತಗೊಳಿಸಿ 2,340 ಕೋಟಿ ರೂ.ಗಳನ್ನಷ್ಟೇ ಮಂಜೂರು ಮಾಡಿದೆ. ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ (ಸುಮಾರು ಶೇ. 4.5) ಪ್ರತಿವರ್ಷ ಅಲ್ಪಾವಧಿ ಕೃಷಿ ಸಾಲದ ಮಿತಿ ನಿಗದಿಪಡಿಸಲಿದ್ದು, ಈ ಸಾಲಕ್ಕೆ ರಾಜ್ಯ ಸರಕಾರ ಖಾತರಿ ನೀಡಿದ ಬಳಿಕ ಬಿಡುಗಡೆಯಾಗುವ ಈ ಸಾಲದ ಮೊತ್ತವು ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ಡಿಸಿಸಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆಯಾಗಲಿದೆ. ಆದರೆ, ಕಳೆದ ವರ್ಷ 5,600 ಕೋಟಿ ರೂ. ಇದ್ದ ಸಾಲದ ಮಿತಿಯನ್ನು ನಬಾರ್ಡ್ ಈ ಸಾಲಿಗೆ ಶೇ. 58 ಕಡಿತಗೊಳಿಸಿ 2,340 ಕೋಟಿ ರೂ.ಗಳನ್ನಷ್ಟೇ ಮಂಜೂರು ಮಾಡಿದೆ. ಇದರಿಂದಾಗಿ ಕಡಿಮೆ ರೈತರಿಗೆ ಮಾತ್ರ ಸಾಲ ಸಿಗುವಂತಾಗುತ್ತದೆ.
ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸುದ್ದಿ ಗೋಷ್ಠಿಯಲ್ಲಿ ಈ ವಿಷಯವನ್ನು ಹಂಚಿಕೊಂಡರು.
‘ನಬಾರ್ಡ್ ಸಾಲದ ಮಿತಿ ಕಡಿತ ಮಾಡದೆ ಕಳೆದ ವರ್ಷದಂತೆ ಕನಿಷ್ಠ 5,600 ಕೋಟಿ ರೂ.ಗಳನ್ನಾದರೂ ಮಂಜೂರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಲಾಗಿದೆ. ಆದರೆ, ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ನಾಬರ್ಡ್ 2023-24 5,600 ಕೋಟಿ ರೂ. (ಶೇ 1 ಏರಿಕೆ) ಸಾಲ ಮಂಜೂರು ಮಾಡಿತ್ತು. ಆದರೆ, 2024-25 2,340 ಕೋಟಿ ರೂ. (ಶೇ 58 ಇಳಿಕೆ) ಮಂಜೂರು ಮಾಡಿದೆ.