ಉತ್ತರಪ್ರದೇಶ: ಮದುವೆ ಮನೆಯಲ್ಲಿ ಸಂತಸದಿಂದ ಕುಣಿಯುತ್ತಿದ್ದ ವರ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ. ಹತ್ರಾಸ್ ನ ಭೋಜ್‌ಪುರ ಗ್ರಾಮದ 22 ವರ್ಷದ ಶಿವಂ ಶಾಲೆಯೊಂದರಲ್ಲಿ ಕಂಪ್ಯೂಟರ್ ಕೋರ್ಸ್ ಕಲಿಸುತ್ತಿದ್ದ. ಆತನ ವಿವಾಹ ನಿಶ್ಚಯವಾಗಿತ್ತು. ಆತನ ಮದುವೆ ಸಮಾರಂಭ ಕೂಡ ನಿಶ್ಚಯವಾಗಿತ್ತು. ಮದುವೆಯ ಸಂಭ್ರಮ ಮನೆಯಲ್ಲಿ ಇದ್ದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ನೃತ್ಯ ಮಾಡುತ್ತಿದ್ದರು. ಈ ನೃತ್ಯ ಸಮಾರಂಭದಲ್ಲಿ ವರ ಕೂಡ ಭಾಗಿಯಾಗಿದ್ದ. ಆದರೆ, ನೃತ್ಯ ಮಾಡುತ್ತ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ವೈದ್ಯರು ಹೃದಯಾಘಾತಕ್ಕೆ ಬಲಿಯಾಗಿದ್ದಾನೆ ಎಂದು ಹೇಳಿದ್ದಾರೆ. ಸಂಭ್ರಮದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.