ನವದೆಹಲಿ: ಬ್ಯಾಂಕ್ ಗಳಲ್ಲಿ ವಿಧಿಸುತ್ತಿರುವ ಬಡ್ಡಿದರ ಹೆಚ್ಚಾಗಿದ್ದು, ಅದು ಕಡಿಮೆ ಆಗಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳು ತನ್ನ ಸಾಮರ್ಥ್ಯ ವಿಸ್ತರಿಸಬೇಕಾದರೆ, ಬ್ಯಾಂಕ್ ಗಳ ಬಡ್ಡಿ ದರ ಕಡಿಮೆಯಾಗಬೇಕು. ಸದ್ಯದ ಸಾಲ ತುಂಬಾ ಹೆಚ್ಚಾಯಿತು ಎನ್ನುವ ಅಭಿಪ್ರಾಯ ವ್ಯಕ್ತವಾಗಬಾರದು. ವಿಕಸಿತ ಭಾರತಕ್ಕಾಗಿ ಕೈಗಾರಿಕೆಗಳು ಹೊಸ ಹೂಡಿಕೆ ಮಾಡಲಿ ಎಂಬ ಬಯಕೆ ಇದೆ. ಇದಕ್ಕಾಗಿ ಬಡ್ಡಿದರ ಕಡಿಮೆಯಾಗುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಬ್ಯಾಂಕುಗಳ ಸಾಲ ದರವಾಗಲಿ, ಠೇವಣಿ ದರವಾಗಲಿ ಹೆಚ್ಚೂಕಡಿಮೆ ಆರ್ಬಿಐನ ರಿಪೋ ಮತ್ತು ರಿವರ್ಸ್ ರಿಪೋ ದರಗಳ ಮೇಲೆ ಅವಲಂಬಿತವಾಗಿರುತ್ತದೆ. ಸದ್ಯ ವಾಣಿಜ್ಯ ಬ್ಯಾಂಕ್ ಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿಯಾಗಿದೆ. ಸದ್ಯ ರಿಪೋ ದರ ಶೇ. 6.5ರ ಮಟ್ಟದಲ್ಲಿ ಇದೆ.