ಅಂಬಿ ಮರಳಿ ಬಂದಿದ್ದಾರೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಇದೇ ನವೆಂಬರ್ 12ರಂದು ನಟ ಅಭಿಷೇಕ್ ಅಂಬರೀಷ್ ಪತ್ನಿ ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪುತ್ರನ ಜನನದ ನಂತರ ಅಭಿಷೇಕ್ ಅಂಬರೀಷ್ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಅಂಬರೀಶ್ ಅವರ ಫೋಟೋದೊಂದಿಗೆ ಫೋಟೋ ಮೇಲೆ ಇಟ್ಸ್ ಅ ಬಾಯ್, ಬೇಬಿ ರೆಬೆಲ್, 12.11.2024” ಎಂದು ಬರೆಯಲಾಗಿದೆ. ಜೊತೆಗೆ, ಎರಡು ಪುಟ್ಟ ಹೆಜ್ಜೆಗಳು ಮತ್ತು ಹಾರ್ಟ್ ಸಿಂಬಲ್ ತೋರಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ. ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತೀವ ಸಂತಸದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದದಿಂದ ಗಂಡು ಮಗು ಜನಿಸಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆಂದು ತಮ್ಮೆಲ್ಲರಿಗೂ ತಿಳಿಸಲು ಇಚ್ಛಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.