ನಟ ಶಿವಣ್ಣ ಅಭಿನಯದ ‘ಭೈರತಿ ರಣಗಲ್’ ಚಿತ್ರ ನ. 15ರಂದು ತೆರೆಗೆ ಅಪ್ಪಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಅಭಿಮಾನಿಗಳು, ಚಿತ್ರ ವಿಮರ್ಶಕರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಈ ಚಿತ್ರ ವಿಮರ್ಶಕರಿಂದಲೂ ಭಾರೀ ಮೆಚ್ಚುಗೆ ಗಳಿಸುತ್ತಿದೆ. ಬಿಡುಗಡೆಯಾದ ಮೂರು ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದು, ಚಿತ್ರ ತಂಡ ಹಾಗೂ ಶಿವಣ್ಣ ಖುಷಿ ಪಡುವಂತೆ ಮಾಡಿದೆ. ಈ ಚಿತ್ರದ ಮೂಲಕ ಶಿವಣ್ಣ ನಿರ್ಮಾಪಕನಾಗಿ ಹಾಗೂ ನಟನಾಗಿ ಅವರು ಗೆಲುವು ಕಂಡಿದ್ದಾರೆ.
ಮಫ್ತಿ’ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದಿತ್ತು. ಅದರ ಪ್ರೀಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿ ಬಂದಿದೆ. ‘ಭೈರತಿ ರಣಗಲ್’ ಸಿನಿಮಾ ಮೂರು ದಿನಕ್ಕೆ 7.25 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ.
ಈ ಚಿತ್ರ ಮೊದಲ ದಿನ 2.1 ಕೋಟಿ ರೂ, ಎರಡನೇ ದಿನ 2.3 ಕೋಟಿ ರೂ, ಮೂರನೇ ದಿನ 2.85 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರ ತಂಡ ಹೇಳಿದೆ. ಈ ಮೂಲಕ ಚಿತ್ರವು ಇಲ್ಲಿಯವರೆಗೆ ಒಟ್ಟಾರೆ 10 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.
ಭೈರತಿ ರಣಗಲ್’ ಸಿನಿಮಾದಲ್ಲಿ ಶಿವಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ರಾಹುಲ್ ಬೋಸ್ ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರ ಇನ್ನೂ ಕೆಲವು ದಿನ ಉತ್ತಮ ಪ್ರದರ್ಶನ ಕಾಣಬಹುದು ಎನ್ನಲಾಗುತ್ತಿದೆ.