ಬೆಂಗಳೂರು: ಬಿಜೆಪಿಯು 40 % ಕಮಿಷನ್ ಆರೋಪದಿಂದ ಮುಕ್ತವಾಗಿದೆ. ಹೀಗಾಗಿ ಈಗ ಕಾಂಗ್ರೆಸ್ ನ ಬಣ್ಣ ಬಯಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಮ್ಮ ಮೇಲೆ 40% ಅರೋಪ ಮಾಡಿತ್ತು. ಆದರೆ, ನಾವು ಈಗ ಆ ಆರೋಪದಿಂದ ಮುಕ್ತರಾಗಿದ್ದೇವೆ. ಲೋಕಾಯುಕ್ತ ತನಿಖೆ ಇದಕ್ಕೆ ಉತ್ತರ ನೀಡಿದೆ. ನಿರುದ್ಯೋಗಿ ಕಂಟ್ರಾಕ್ಟರ್ ಗಳೆಲ್ಲ ಸೇರಿಕೊಂಡು ನಮ್ಮ ಮೇಲೆ ಅರೋಪ ಮಾಡಿದ್ದರು. ಇವರಿಗೆ 40% ಪ್ರೂವ್ ಮಾಡಲು ಅಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ನನ್ನನ್ನು ಮುಟ್ಟಿದರೆ ಹುಷಾರ್ ಎನ್ನುತ್ತಿದ್ದಾರೆ. ತಪ್ಪು ಮಾಡಿಲ್ಲ ಅಂದರೆ ಹೀಗೆ ಏಕೆ ಹೇಳ್ತಿದ್ದೀರಾ? ಯಾರನ್ನಾದರೂ ಪ್ರಶ್ನೆ ಮಾಡಿದ್ದರೆ ಅವರಿಗೆ ಹೊಡೆಯೋದು. ಮಾತು ಎತ್ತಿದ್ರೆ ನಾನು ಹಿಂದುಳಿದವನು ಎನ್ನುವುದು ಮಾಡುವುದೇ ಏಕೆ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು ಹೈಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಂಡ ಬಂದಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ನೀವೇ ನೇಮಕ ಮಾಡಿರುವ ಪೊಲೀಸರ ಮುಂದೆ ಕೈ ಕಟ್ಟಿ ನಿಂತಾಗ ನಿಮಗೆ ನಾಚಿಕೆ ಆಗಲಿಲ್ಲವೇ ಎಂದು ಗುಡುಗಿದ್ದಾರೆ.
ನಮ್ಮ ಹೋರಾಟದಿಂದ ಒಂದು ವಿಕೆಟ್ ಈಗಾಗಲೇ ಬಿದ್ದಿದೆ. ಮತ್ತೊಂದು ಪ್ರಮುಖ ವಿಕೆಟ್ ಕೆಲವೇ ದಿನಗಳಲ್ಲಿ ಬೀಳುತ್ತದೆ ಎಂದು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ. ಡಿ.ಕೆ ಶಿವಕುಮಾರ್ ಬ್ರಾಂಡ್ ಬೆಂಗಳೂರನ್ನ ಬ್ಯಾಡ್ ಬೆಂಗಳೂರು ಮಾಡಿದ್ದಾರೆ. ಜಯನಗರದ ತೆರಿಗೆ ಜಯನಗರ ಕ್ಷೇತ್ರಕ್ಕೆ ಸಿಗಬೇಕು. ಅನುದಾನ ಬೇಕಂದ್ರ ತಗ್ಗಿ ಬಗ್ಗಿ ನಡೆಯಬೇಕಂತೆ, ಬೆಂಗಳೂರು ಕಟ್ಟಿದ್ದು ಡಿ.ಕೆ ಶಿವಕುಮಾರ್ ಅಲ್ಲ ಕೆಂಪೇಗೌಡರು. ಹೈದರಾಬಾದ್ ನಲ್ಲಿ ನಿಜಾಮರಂತೆ ಈ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.