ಬೆಂಗಳೂರು: ವಿದ್ಯಾರ್ಥಿಯೋರ್ವ ಎಸ್ಸೆಸ್ಸೆಲ್ಸಿಯಲ್ಲಿ ಮೂರು ಬಾರಿ ಫೇಲ್ ಆಗಿದ್ದಕ್ಕೆ ಕೋಪಗೊಂಡು ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ ತಿಪ್ಪಸಂದ್ರದ ಸರ್ಕಲ್ ನಲ್ಲಿ ನಡೆದಿದೆ. ತಿಪ್ಪಸಂದ್ರದಲ್ಲಿನ ಅಪ್ರಾಪ್ತ ಬಾಲಕ ದೈವ ಭಕ್ತನಾಗಿದ್ದನು. ಭುವನೇಶ್ವರಿ ದೇವಿಯನ್ನು ಪ್ರತಿದಿನ ಪೂಜಿಸುತ್ತಿದ್ದ. ಆದರೆ, ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ಕೋಪಗೊಂಡು, ವಿಗ್ರಹವನ್ನೇ ವಿರೂಪಗೊಳಿಸಿದ್ದಾನೆ.
ಬಾಲಕನು ಮಧ್ಯರಾತ್ರಿ ಒಬ್ಬನೇ ಓಡಾಡಿದ್ದು, ವಿಗ್ರಹ ವಿರೂಪಗೊಳಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗ್ಗೆ ದೇವಸ್ಥಾನಕ್ಕೆ ಬಂದ ಭಕ್ತರು ವಿಗ್ರಹ ವಿರೂಪಗೊಂಡಿದ್ದನ್ನು ಕಂಡು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.