ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಹೊರ ಬಂದಿದ್ದು, ಇಂದೋರ್ ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಪಂದ್ಯದಲ್ಲಿ 7 ವಿಕೆಟ್ ಪಡೆಯುವ ಮೂಲಕ ತಮ್ಮ ತಂಡಕ್ಕೆ ರೋಚಕ ಜಯ ತಂದು ಕೊಟ್ಟಿದ್ದಾರೆ.
ಮಧ್ಯಪ್ರದೇಶ್ ವಿರುದ್ಧ ಬಂಗಾಳ ತಂಡ ರೋಚಕ ಜಯ ಸಾಧಿಸಲು ಶಮಿ ಕೊಡುಗೆ ಹೆಚ್ಚಾಗಿದೆ. ಗೆಲುವಿನ ರೂವಾರಿ ಮೊಹಮ್ಮದ್ ಶಮಿ ಬಂಗಾಳ ಪರ ಕಣಕ್ಕಿಳಿದಿರುವ ಶಮಿ ಒಟ್ಟು 7 ವಿಕೆಟ್ ಪಡೆದಿದ್ದಾರೆ.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಂಗಾಳ ತಂಡವು 228 ರನ್ ಗಳಿಸಿದ್ದು. ನಂತರ ಬ್ಯಾಟ್ ಬೀಸಿದ ಮಧ್ಯಪ್ರದೇಶ್ ತಂಡಕ್ಕೆ ಮೊಹಮ್ಮದ್ ಶಮಿ ಮಾರಕವಾಗಿ ಪರಿಣಮಿಸಿದರು. ಪರಿಣಾಮ ಮಧ್ಯಪ್ರದೇಶ್ ತಂಡವು ಕೇವಲ 167 ರನ್ ಗಳಿಗೆ ಆಲೌಟ್ ಆಯಿತು. ಈ ವೇಳೆ ಶಮಿ 4 ವಿಕೆಟ್ ಪಡೆದರು.
ದ್ವಿತೀಯ ಇನಿಂಗ್ಸ್ನಲ್ಲಿ ಬಂಗಾಳ ತಂಡವು 276 ರನ್ ಗಳಿಸಿತು. ಹೀಗಾಗಿ ಮಧ್ಯಪ್ರದೇಶ್ ತಂಡಕ್ಕೆ 338 ರನ್ ಗಳ ಗುರಿ ನೀಡಲಾಯಿತು. ಗುರಿಯನ್ನು ಬೆನ್ನತ್ತಿದ ಮಧ್ಯಪ್ರದೇಶ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ತಮ್ಮ ಅನುಭವವನ್ನು ಧಾರೆಯೆರೆದ ಶಮಿ ಹಾಗೂ ಶಹಬಾಝ್ ಅಹ್ಮದ್ ಅಂತಿಮ ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ತಂಡಕ್ಕೆ ಜಯ ತಂದು ಕೊಟ್ಟರು.
ಮಧ್ಯಪ್ರದೇಶ್ ತಂಡದ ಗೆಲುವಿಗೆ ಕೇವಲ 11 ರನ್ ಗಳ ಅವಶ್ಯಕತೆಯಿದ್ದಾಗ ಮೊಹಮ್ಮದ್ ಶಮಿ, ಕುಮಾರ್ ಕಾರ್ತಿಕೇಯ ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಒಟ್ಟು 44 ಓವರ್ ಎಸೆದಿರುವ ಶಮಿ, 7 ವಿಕೆಟ್ ಪಡೆದು ಮಿಂಚಿದ್ದಾರೆ. ಬ್ಯಾಟಿಂಗ್ ನಲ್ಲೂ 37 ರನ್ ಗಳ ಕೊಡುಗೆ ನೀಡಿದ್ದಾರೆ.