ತಮಿಳು ನಟ ಶಿವ ಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಅಭಿನಯಿಸಿರುವ ‘ಅಮರನ್ ಸಿನಿಮಾ’ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರದ ಮೇಲೆ ದುಷ್ಕರ್ಮಿಗು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ನಡೆದಿದೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮೇಳಪಾಳ್ಯಂನ ಚಿತ್ರಮಂದಿರದ ಮೇಲೆ ಎಸೆಯಲಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯನ್ನು ಇಡೀ ತಮಿಳುನಾಡು ಖಂಡಿಸುತ್ತಿದೆ. ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ತೀವ್ರವಾಗಿ ಖಂಡಿಸಿದ್ದಾರೆ. ‘ತಮಿಳುನಾಡಿನ ಜನ ಈ ಸಿನಿಮಾವನ್ನು ಸ್ವಾಗತಿಸಿ, ದೊಡ್ಡ ಯಶಸ್ಸು ಗಳಿಸಲು ಸಹಕರಿಸಿದ್ದಾರೆ. ಅರಗಿಸಿಕೊಳ್ಳಲಾಗದೆ ಕೆಲವು ಮೂಲಭೂತವಾದಿ ಸಂಘಟನೆಗಳು ಈ ರೀತಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮರನ್ ಚಿತ್ರವು ದಿವಂಗತ ಸೇನಾ ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತ ಚಿತ್ರವಾಗಿದೆ.