ಮೈಸೂರು: ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಸದ್ಯ ಮುಡಾದ ಬಳಿ ವ್ಯಕ್ತಿಯೊಬ್ಬರಿಂದ ಯಾವಾಗ ನಿವೇಶನ ಪಡೆದಿದೆ ಎಂಬ ಮಾಹಿತಿಯೇ ಇಲ್ಲ. ಆದರೂ 19 ನಿವೇಶನಗಳನ್ನು ಹಂಚಿರುವುದು ತಿಳಿದು ಬಂದಿದೆ.
ಮಹೇಂದ್ರ ಎಂಬುವವರಿಗೆ ಸೇರಿದ 2.22 ಎಕರೆ ಭೂಮಿ ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ, ಅದರ ಮಾಹಿತಿಯೇ ಮುಡಾದ ಬಳಿ ಇಲ್ಲ. ಆದರೂ ಅವರಿಗೆ 50-50 ಅನುಮಪಾತದಲ್ಲಿ ಸೈಟ್ಗಳನ್ನು ಹಂಚಿಕೆ ಮಾಡಲಾಗಿದೆ.
ದೇವನೂರು ಗ್ರಾಮದ ಸರ್ವೆ ನಂ. 81/2 ರಲ್ಲಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಆದರೆ ಯಾವಾಗ ಆ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಅದರ ಬಳಿ ಇಲ್ಲ. ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಿಸಲಾಗಿದೆ. ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ ಗಳನ್ನು ಮಾತ್ರ. ಆದರೆ, 4060 ಮತ್ತು 4030 ರ 3600 ಚದರ ಅಡಿ ಮಾತ್ರ ಪರಿಹಾರ ಸಿಗಬೇಕಾಗಿತ್ತು. ಆದರೆ ನಗರದ ಪ್ರಮುಖ ಪ್ರದೇಶದಲ್ಲೇ 19 ನಿವೇಶನವನ್ನು ಮುಡಾ ಅಧಿಕಾರಿಗಳು ನೀಡಿದ್ದಾರೆ.