ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತೆರಳಿ, ಆರೋಪಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಮಹಿಳೆ ಹಾಗೂ ವ್ಯಕ್ತಿಯ ಮಧ್ಯೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಮಾವ ಸೊಸೆಯ ಪರವಾಗಿ ಎಂಟ್ರಿ ಕೊಟ್ಟಿದ್ದಾರೆ.
ಆಗ ಜಗಳ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ಕಿಚನ್ ಗೆ ಓಡಿ ಹೋದ ಮಹಿಳೆ, ಆರೋಪಿಗೆ ಇರಿಯುವುದಕ್ಕಾಗಿ ಚಾಕು ತರಲು ಹೋಗಿದ್ದಾರೆ. ಆಗ ಚಾಕುವನ್ನು ಮಾವನ ಕೈಗೆ ಎಸೆದಿದ್ದಾರೆ. ಆದರೆ, ಅದು ಮಿಸ್ ಆಗಿ ಕೆಳಗೆ ಬಿದ್ದಿದೆ. ಆಗ ಆರೋಪಿತ ವ್ಯಕ್ತಿ ಅಂದರೆ, ಜಗಳ ಮಾಡುತ್ತಿದ್ದ ವ್ಯಕ್ತಿ ಚಾಕು ತೆಗೆದುಕೊಂಡು ಮಾವನ ಬೆನ್ನಿಗೆ ಚುಚ್ಚಿದ್ದಾನೆ. ಘಟನೆಯಲ್ಲಿ ಜಗಳ ತೆಗೆದಿದ್ದ ಸೊಸೆಯ ಮಾವ ದಳಪತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.