ರಾಮನಗರ: ಇಡೀ ದೇಶದ ಗಮನ ಸೆಳೆದ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಈಗಾಗಲೇ ಮುಕ್ತಾಯವಾಗಿದೆ. ಆದರೆ, ಅದೇಕೋ ಸಿ.ಪಿ. ಯೋಗೇಶ್ವರ್ ಅವರ ಆತ್ಮವಿಶ್ವಾಸ ಕುಗ್ಗಿದಂತಾಗಿದೆ. ಸುದ್ದಿಗೋಷ್ಠಿಯಲ್ಲಿ ಮತದಾರರಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದ ಅವರ ಮಾತುಗಳಲ್ಲಿ ಸೋಲಿನ ಭಯ ಕಾಣುವಂತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಫಲಿತಾಂಶ ಏನೇ ಆಗಿರಲಿ, ನಾನು ಪಕ್ಷಾಂತರ ಮಾಡಿರುವುದು ಹಲವರಿಗೆ ಬೇಸರ ತಂದಿದೆ ಎಂದಿದ್ದಾರೆ. ಸೋತರೆ, ಪಕ್ಷಗಳನ್ನು ಆಗಾಗ ಬದಲಾವಣೆ ಮಾಡಿದ್ದಕ್ಕೆ ತಿರಸ್ಕಾರ ಮಾಡಿದ್ದಾರೆ ಎಂದುಕೊಳ್ಳಬಹುದು. ಜತೆಗೆ ಕಾಂಗ್ರೆಸ್ ನ ವರ್ಚಸ್ಸು ಕ್ಷೇತ್ರದಲ್ಲಿ ಇಲ್ಲ ಎನ್ನಬಹುದು.
ಇಬ್ಬರು ಒಂದೇ ಸಮುದಾಯದವರು ಸ್ಪರ್ಧೆ ಮಾಡಿದ್ದೇವೆ. ಆದರೆ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಬಲ ವ್ಯಕ್ತಿಗಳಾದ ದೇವೇಗೌಡ, ಕುಮಾರಸ್ವಾಮಿ ಕೆಲಸ ಮಾಡಿದ್ದಾರೆ. ಫಲಿತಾಂಶ ಏನಾಗಿತ್ತೋ ನೋಡಬೇಕಿದೆ. “ಜಮೀರ್ ಮಾತನ್ನು ವಯಕ್ತಿಕವಾಗಿ ಖಂಡಿಸುತ್ತೇನೆ. ಸಮುದಾಯಕ್ಕೆ ಹಾನಿಯಾಗಿದೆ. ಜೆಡಿಎಸ್ ನವರು ಮತ ಹಾಕಲು ಮುಂದಾಗಿದ್ದರು. ಆದರೆ, ಈ ಹೇಳಿಕೆ ಕೆಲವರಿಗೆ ನೋವು ತಂದಿದೆ ಎಂದಿದ್ದಾರೆ.
ಈಗ ನಾನು ಸೋತಿದ್ದೇನೆ ಅಂತಾ ಅಲ್ಲ. ಆದರೆ, ಸಮಬಲ ಹೋರಾಟ ಇದೆ. ರಾಜಕೀಯ ದೈತ್ಯ ದೇವೇಗೌಡರಿಗೆ ಮೊಮ್ಮಗನ್ನು ಗೆಲ್ಲಿಸಬೇಕು ಎಂಬ ಹಠ ಇತ್ತು. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಬಲ ಕ್ಷೇತ್ರ ಇದಾಗಿದ್ದು, ಇದನ್ನು ಉಳಿಸಿಕೊಳ್ಳಲೇಬೇಕು ಎಂಬುವುದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಇತ್ತು. ಆದರೆ, ಇನ್ನೂ ಒಕ್ಕಲಿಗರು ಆ ಕುಟುಂಬಕ್ಕೆ ಅಂಟಿಕೊಂಡಿದ್ದಾರೆ. ನಾನು, ಡಿಕೆಶಿ ಒಕ್ಕಲಿಗರಿದ್ದರೂ ಹೆಚ್ಚು ಒಕ್ಕಲಿಗರು ಆ ಕಡೆ ಇದ್ದಂತಿತ್ತು ಎಂದಿದ್ದಾರೆ.
ಈ ಬಾರಿ ಗೆಲುವಿಗೆ 1 ಲಕ್ಷಕ್ಕಿಂತ ಹೆಚ್ಚಿನ ಮತಗಳನ್ನು ತೆಗೆದುಕೊಳ್ಳಬೇಕು. ನಾನು ಈ ಹಿಂದಿನ ಚುನಾವಣೆಗಳಲ್ಲಿ 75 ಸಾವಿರ ಮತ ಪಡೆದಿದ್ದೆ. ಈಗ ಮತದಾರ ಸಾಕಷ್ಟು ಜಾಗೃತವಾಗಿದ್ದಾನೆ. ಏನಾಗುತ್ತದೆಯೋ ನೋಡೋಣ ಎಂದಿದ್ದಾರೆ.