ಬೆಂಗಳೂರು: ಕೊರೊನಾ ಸಮಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಅವಧಿಯಲ್ಲಿ ನಡೆದಿದೆಯೆನ್ನಲಾದ ಸಾವಿರಾರು ಕೋಟಿ ರೂ. ಪ್ರಕರಣದ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ಎಸ್ ಐಟಿ ರಚನೆಗೆ ಮುಂತಾಗಿದೆ.
ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಹಗರಣದ ಸಂಬಂಧ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವರು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವ ಸಂಪುಟದಲ್ಲಿ ಎಸ್ ಐಟಿಗೆ ಪ್ರಕರಣ ವಹಿಸಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಕೊರೊನಾ ಸಂದರ್ಭದಲ್ಲಿ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಕೊವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗುವುದು. ವರದಿ ನಂತರ ಎಸ್ಐಟಿ ತನಿಖೆ ಆಗಲಿದೆ . ಅಗತ್ಯ ಬಿದ್ದರೆ FIR ದಾಖಲಾಗುತ್ತದೆ ಎಂದು ಹೇಳಿದ್ದಾರೆ.
ಬಿಎಸ್ವೈ, ರಾಮುಲು ಕಾರ್ಯವೈಖರಿಗೆ ಸಮಿತಿ ಅಕ್ಷೇಪ ವ್ಯಕ್ತಪಡಿಸಿದ್ದು, ಖಾಸಗಿ ಲ್ಯಾಬ್ಗಳಿಗೆ 6.93ಕೋಟಿ ಹಣ ಸಂದಾಯವಾಗಿದೆ. 14 ಲ್ಯಾಬ್ಗಳು ICMRನಿಂದ ಮಾನ್ಯತೆ ಪಡೆದಿಲ್ಲ. ಈ ICMR ಲ್ಯಾಬ್ಗಳು ಅಧಿಕೃತ ಅಲ್ಲ ಎಂದು ಜಾನ್ ಮೈಕೆಲ್ ಡಿ ಕುನ್ಹಾ ಸಮಿತಿಯ ವರದಿ ಹೇಳಿದೆ ಎಂದು ಹೇಳಿದ್ದಾರೆ.