ಬೆಂಗಳೂರು: ವಿದ್ಯಾರ್ಥಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಪೊಲೀಸರು ಸೇಫ್ ರೂಟ್ ಟು ಸ್ಕೂಲ್ ಯೋಜನೆ ರೂಪಿಸಿದ್ದು, ಸದ್ಯದಲ್ಲೇ ಇದನ್ನು ರಸ್ತೆಗೆ ಇಳಿಸಲು ಮುಂದಾಗಲಾಗಿದೆ.
ಸಿಲಿಕಾನ್ ಸಿಟಿಯಲ್ಲಿನ 36 ಶಾಲಾ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸದ್ಯ ಈ ಸೇಪ್ ರೂಟ್ ಟು ಸ್ಕೂಲ್ ಯೋಜನೆ ಯೋಜನೆಯ ಲಾಭ ಸಿಗಲಿದೆ. ಅಶೋಕನಗರ, ಕಬ್ಬನ್‌ಪಾರ್ಕ್, ಇಂದಿರಾನಗರ, ಹೆಣ್ಣೂರು, ಜಯನಗರ ವ್ಯಾಪ್ತಿ ಸೇರಿದಂತೆ ಹಲವು ಶಾಲೆಗಳ ಹತ್ತಿರ ಸಾಕಷ್ಟು ಸಂಚಾರ ದಟ್ಟಣೆಯಾಗುತ್ತಿದೆ. ಇದರಿಂದಾಗಿ ಸಾಕಷ್ಟು ಅವಾಂತರಗಳು ನಡೆಯುತ್ತಿವೆ. ಹೀಗಾಗಿ ಪೊಲೀಸರು ಈ ಯೋಜನೆಗೆ ಮುಂದಾಗಿದ್ದಾರೆ.
ಈ ಪ್ರದೇಶಗಳಲ್ಲಿ ಎಲ್ಲ ವಾಹನಗಳ ವೇಗಕ್ಕೆ ಕಡಿವಾಣ ಇರಲಿದೆ. ಸಂಚಾರ ನಿಯಮಗಳ ಪಾಲನೆ ಕುರಿತು ಮಾರ್ಗಸೂಚಿ ಫಲಕಗಳು ಮತ್ತು ರಬ್ಬಲ್ ಸ್ಟ್ರಿಫ್ಸ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಶಾಲೆಗಳ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ನಿರ್ಬಂಧ ಹೇರಲಾಗುತ್ತದೆ. ಸಂದರ್ಭದಲ್ಲಿ ಮಕ್ಕಳು ಸುರಕ್ಷಿತವಾಗಿ ವಾಹನ ಹತ್ತಲು, ಇಳಿಯಲು ಅವಕಾಶ ನೀಡಲಾಗುತ್ತದೆ.
ಲಾ ಆರಂಭ ಹಾಗೂ ಅಂತ್ಯದ ವೇಳೆ ಹೆಚ್ಚಿನ ಸಂಚಾರ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿಯನ್ನು ಆ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದು ಸೇರಿದಂತೆ ಹಲವಾರು ವಿಷಯಗಳನ್ನು ಪೊಲೀಸರು ಈಗಾಗಲೇ ಚರ್ಚಿಸಿದ್ದಾರೆ. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದ್ದು, 3.50 ಕೋಟಿ ರೂ. ಅನುದಾನದಲ್ಲಿ ಈ ಕಾರ್ಯ ನಡೆಯುತ್ತಿದೆ. ಹೀಗಾದರೆ, ಮಕ್ಕಳಿಗೆ ಸುರಕ್ಷಿತ ರಸ್ತೆ ಸಿಕ್ಕಂತಾಗಿ, ಅವರು ನಿಶ್ಚಿಂತೆಯಿಂದ ಶಾಲೆಗೆ ಹೋಗಿ ಬರಬಹುದು.