ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ.
ವರ್ಮಾ ಯಾವಾಗಲೂ ಬಾಯಿಗೆ ಬಂದಿದ್ದನ್ನು ಮಾತಾಡಿ ಬಿಡುತ್ತಾರೆ. ಸದ್ಯ ಅದೇ ಮಾತು ಈಗ ಅವರಿಗೆ ಸಂಕಷ್ಟ ತಂದಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ವರ್ಮಾ, ಆಂಧ್ರ ಸಿಎಂ ವಿರುದ್ಧ ಟ್ವೀಟ್ ಮಾಡಿ ಫಜೀತಿಗೆ ಸಿಲುಕಿದ್ದಾರೆ.
ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಪಕ್ಷದ ಮುಖಂಡರೊಬ್ಬರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅವರ ಪುತ್ರ ಮತ್ತು ಸಚಿವ ನಾರಾ ಲೋಕೇಶ್ ಹಾಗೂ ಅವರ ಸೊಸೆಯ ವಿರುದ್ಧ ಮಾನಹಾನಿಕಾರಕ ಟ್ವೀಟ್ ಮಾಡಿದ್ದರು.
ಹೀಗಾಗಿ ಈಗ ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯದಲ್ಲೇ ಪೊಲೀಸರು ಬಂಧಿಸಬಹುದು ಎನ್ನಲಾಗಿದೆ.