ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಈಗ ಐಪಿಎಲ್ ನದ್ದೇ ಸದ್ದು ಎನ್ನುವಂತಾಗಿದೆ. ಅದರಲ್ಲೂ ಅತೀ ಹೆಚ್ಚು ಫ್ಯಾನ್ಸ್ ಗಳನ್ನು ಹೊಂದಿರುವ ತಂಡವಾಗಿರುವ ಆರ್ ಸಿಬಿ ಬಗ್ಗೆ ಅಭಿಮಾನಿಗಳು ಎಲ್ಲಿಲ್ಲದ ಆಸಕ್ತಿ ತೋರುತ್ತಿದ್ದಾರೆ. ಕನ್ನಡಿಗ ಕೆ,ಎಲ್. ರಾಹುಲ್ ಅವರನ್ನು ಲಕ್ನೇ ತಂಡ ಕೈ ಬಿಟ್ಟಿದ್ದೆ ತಡ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ತಂಡ ಕೂಡ ರಾಹುಲ್ ಗಾಗಿ ವಿಶೇಷ ಆಸಕ್ತಿ ತಾಳಿದೆ ಎನ್ನಲಾಗಿದೆ.
ಈಗಾಗಲೇ ಆರ್ ಸಿಬಿಯು ವಿರಾಟ್ ಕೊಹ್ಲಿ, ಯಶ್ ದಯಾಳ್, ರಜತ್ ಪಟೀದಾರ್ ರನ್ನು ಉಳಿಸಿಕೊಂಡಿದೆ. ಈಗ ಮತ್ತಷ್ಟು ಉತ್ತಮ ಆಟಗಾರರನ್ನು ಖರೀದಿಸಿ, ಬಲಿಷ್ಠ ತಂಡ ಕಟ್ಟಬೇಕು ಎಂಬ ಇರಾದೆಯಲ್ಲಿದೆ. ಹೀಗಾಗಿ ಅಳೆದು ತೂಗಿ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತಿದೆ. ಈ ಮಧ್ಯೆ ಕನ್ನಡಿಗನನ್ನು ತಂಡದೊಳಗೆ ಹಾಕಿಕೊಳ್ಳಲು ಈನಿಂದಲೇ ಪ್ಲ್ಯಾನ್ ರೂಪಿಸುತ್ತಿದೆ ಎನ್ನಲಾಗಿದೆ.
ಅಲ್ಲದೇ, ಕೆ.ಎಲ್. ರಾಹುಲ್ ಗೆ ಹಲವು ತಂಡಗಳು ಬಾಜಿ ಕಟ್ಟಲು ಸಿದ್ಧತೆ ಮಾಡಿಕೊಂಡಿವೆ ಎನ್ನಲಾಗುತ್ತಿದೆ. ಈಗಾಗಲೇ ಆರ್ ಸಿಬಿ ಪರ್ಸ್ ನಲ್ಲಿ ಇನ್ನೂ 83 ಕೋಟಿ ರೂ. ಉಳಿದಿದೆ. ಈ ಪೈಕಿ ಬರೋಬ್ಬರಿ 30 ಕ್ಟೋ ರೂ. ವರೆಗೆ ರಾಹುಲ್ ಗೆ ಬಾಜಿ ಕಟ್ಟಲು ಆರ್ ಸಿಬಿ ಮುಂದಾಗಿದೆ ಎಂದು ತಿಳಿದು ಬಂದಿದೆ.
ರಾಹುಲ್ ಆರ್ ಸಿಬಿ ಪರ 2016ರಲ್ಲಿ ಕೊನೆಯ ಬಾರಿಗೆ ಆಡಿದ್ದರು. ಈಗಲೂ ರಾಹುಲ್ ಗೆ ಆರ್ ಸಿಬಿ ಸೇರಬೇಕೆಂಬ ಬಯಕೆ ಇದೆ. ಅಲ್ಲದೇ, ಈಗ ಸಮಯವೂ ಕೂಡಿ ಬಂದಿದೆ. ಆದರೆ, ಕೊನೆಯ ಸಮಯದಲ್ಲಿ ಏನಾಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.